ಮನ್ ಕಿ ಬಾತ್‌‌ನಲ್ಲಿ ಕಲಬುರಗಿ ಜೋಳದ ರೊಟ್ಟಿ ಬಗ್ಗೆ ಪ್ರಧಾನಿ ಮೋದಿ ಗುಣಗಾನ| Modi

modi
Published on

ನವದೆಹಲಿ: ಬಿಸಿಲನಾಡು ಕಲಬುರಗಿಯ ಖಡಕ್ ಜೋಳದ ರೊಟ್ಟಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೂ ಮಹಿಳೆಯರ ಪರಿಶ್ರಮಕ್ಕೆ ಮೋದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದು (29) ತಮ್ಮ ಮನ್ ಕಿ ಬಾತ್‌ನ 123ನೇ ಸರಣಿಯಲ್ಲಿ ಮಾತನಾಡಿದ ಮೋದಿ, ಮಹಿಳಾ ಸ್ವಾವಲಂಬನೆ ಭಾರತದ ಅಭಿವೃದ್ಧಿಯ ಹೊಸ ಮಂತ್ರವಾಗಿದೆ. ಮಹಿಳೆ ತಾಯಿ, ಸಹೋದರಿ, ಮಗಳಾಗಿ ಇಡೀ ಸಮಾಜಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾಳೆ. ಕಲಬುರಗಿ ಮಹಿಳೆಯರು ಆತ್ಮನಿರ್ಭರ ಅಭಿಯಾನದಡಿ ಜೋಳದ ರೊಟ್ಟಿಯನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ.

ಕಲಬುರಗಿ ಮಹಿಳೆಯರು ಸ್ವ-ಸಹಾಯ ಸಂಘದ ಮೂಲಕ ನಿತ್ಯ 3 ಸಾವಿರ ರೊಟ್ಟಿ ಮಾಡುತ್ತಿದ್ದಾರೆ. ರೊಟ್ಟಿಯ ಘಮಲು ಗ್ರಾಮಗಳಿಗೆ ಮಾತ್ರ ಸೀಮಿತವಾಗಿಲ್ಲ. ಬೆಂಗಳೂರಿನಲ್ಲಿ ವಿಶೇಷ ಮಳಿಗೆ ತೆರೆಯಲಾಗಿದೆ. ಆನ್‌ಲೈನ್ ಮೂಲಕ ಆರ್ಡರ್ ಬರುತ್ತಿವೆ. ಕಲಬುರಗಿಯ ರೊಟ್ಟಿ ದೊಡ್ಡ ನಗರಗಳ ಅಡುಗೆ ಮನೆಯನ್ನೂ ತಲುಪಿದೆ. ಇದು ಮಹಿಳೆಯರ ಸಾಧನೆಯಾಗಿದೆ. ಇದು ಆತ್ಮವಿಶ್ವಾಸ, ಆತ್ಮನಿರ್ಭರದ ಪ್ರತೀಕವಾಗಿದೆ' ಎಂದು ಮೋದಿ ಹೇಳಿದ್ದಾರೆ.

(ಏಜೆನ್ಸೀಸ್)

ಮಹಿಳೆಯರ ನೇತೃತ್ವದ ಅಭಿವೃದ್ಧಿ ಎಂಬ ಮಂತ್ರವು ಹೊಸ ಭವಿಷ್ಯವನ್ನು ಸೃಷ್ಟಿಸಲು ಸಿದ್ಧವಾಗಿದೆ. ಭಾರತದ ನಮ್ಮ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು ಇಂದು ತಮಗಾಗಿ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಹೊಸ ದಿಕ್ಕನ್ನು ನೀಡುತ್ತಿದ್ದಾರೆ. ತೆಲಂಗಾಣದ ಭದ್ರಾಚಲಂನ ಮಹಿಳೆಯರ ಯಶಸ್ಸಿನ ಬಗ್ಗೆ ತಿಳಿದಾಗ ಸಂತೋಷವಾಗುತ್ತದೆ. ಈ ಮಹಿಳೆಯರು ಒಂದು ಕಾಲದಲ್ಲಿ ಹೊಲಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಜೀವನೋಪಾಯಕ್ಕಾಗಿ ದಿನವಿಡೀ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net