ಶ್ರೀ ಗುರುನಾನಕರಿಗೆ ಗೌರವ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

PM Modi pays tributes to Guru Nanak on his birth anniversary
Published on

ನವದೆಹಲಿ: ಸಿಖ್ ಪಂಥದ ಧರ್ಮ ಗುರು ಶ್ರೀ ಗುರುನಾನಕ್ ದೇವ್ ಅವರ ಜಯಂತಿಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮೂಲಕ ಗೌರವಾರ್ಪಣೆ ಮಾಡಿದ್ದಾರೆ. ಸಿಖ್​ ಪಂಥದ ಮೊದಲ ಧರ್ಮ ಗುರು ಶ್ರೀ ಗುರುನಾನಕ್ ದೇವ್ 1469ನೇ ಇಸವಿಯಲ್ಲಿ ಇದೇ ದಿನ ಈಗಿನ ಪಾಕಿಸ್ತಾನದ ನಾನ್​ಕನಾದಲ್ಲಿ ಜನ್ಮತಾಳಿದ್ದರು.

ಅವರ ಜೀವನಾದರ್ಶಗಳನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಶ್ರೀಗುರುನಾನಕರ ಚಿಂತನೆಗಳು ಜಗದೊಳಿತಿಗೆ ಪ್ರೇರಣೆಯಾಗಲಿ. ಅವರಿಗೆ ತಲೆಬಾಗಿ ನಮಿಸುವೆ ಎಂದು ಟ್ಟೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net