

ನವದೆಹಲಿ: ಭಾರತದ ನೆರವಿನೊಂದಿಗೆ ಮಾರಿಷಸ್ನಲ್ಲಿ ನಿರ್ಮಿಸಲಾದ ಅಲ್ಲಿನ ಸುಪ್ರೀಂ ಕೋರ್ಟ್ ಕಟ್ಟಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆ ರಾಷ್ಟ್ರದ ಪ್ರಧಾನಿ ಪ್ರವಿಂದ ಕುಮಾರ ಜಗನ್ನಾಥ ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದರು. ತನ್ನ ವಿದೇಶ ನೀತಿಯ ಹಿಂದು ಮಹಾಸಾಗರ ವಲಯದ ದೇಶಗಳ ಸಹಕಾರ, ಸಹಭಾಗಿತ್ವದ ಅಂಗವಾಗಿ ಭಾರತ ಮಾರಿಷಸ್ಗೆ ನೆರವು ನೀಡಿದೆ.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಸುಪ್ರೀಂ ಕೋರ್ಟ್ನ ಹೊಸ ಕಟ್ಟಡ ಉಭಯ ದೇಶಗಳ ಸಹಕಾರದ ಸಂಕೇತವಾಗಿದೆ.ಮಾರಿಷಸ್ನ ಮುಂದಿನ ತಲೆಮಾರಿನವರಿಗೂ ನೆರವಾಗುವುದು ಭಾರತದ ಉದ್ದೇಶವಾಗಿದೆ. ಆಧುನೀಕರಣ ಹಾಗೂ ಪರಿಶ್ರಮ ಕುರಿತ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಕೋವಿಡ್-19 ಮಹಾಮಾರಿಯನ್ನು ಪುಟ್ಟ ದೇಶ ಮಾರಿಷಸ್ ಎದುರಿಸಿದ ಬಗೆಯನ್ನು ಶ್ಲಾಘಿಸಿದರು. ಅದಕ್ಕೆ ಭಾರತ ವೈದ್ಯಕೀಯ ಮತ್ತಿತರ ನೆರವು ನೀಡಿದ್ದನ್ನು ಕೂಡ ಸ್ಮರಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
‘ಸತ್ಯಮೇವ ಜಯತೆ’ ಸಿದ್ಧಾಂತದಲ್ಲಿ ತಮ್ಮ ದೇಶಕ್ಕೆ ನಂಬಿಕೆಯಿದೆ ಎಂದ ಮಾರಿಷಸ್ ಪ್ರಧಾನಿ ಜಗನ್ನಾಥ,‘ಶ್ರೀ ಮೋದೀಜಿ, ಹಮಾರಾ ದೇಶ್, ಹಮಾರಿ ಜನತಾ ಆಪ್ಕೆ ಸಮರ್ಥನ್ ಕೆ ಲಿಯೆ ಆಭಾರಿ ಹೈ’ (ನಮ್ಮ ದೇಶ, ನಮ್ಮ ಜನರು ತಮ್ಮ ಬೆಂಬಲಕ್ಕಾಗಿ ಆಭಾರಿಯಾಗಿದ್ದೇವೆ) ಎಂದರು.
ಸುಪ್ರೀಂ ಕೋರ್ಟ್ ಕಟ್ಟಡದ ಬಗ್ಗೆ ಒಂದಿಷ್ಟು: ಸುಪ್ರೀಂಕೋರ್ಟ್ ನೂತನ ಕಟ್ಟಡ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿದೆ. 2016ರಲ್ಲಿ ಭಾರತ ಆಶ್ವಾಸನೆ ನೀಡಿದ್ದ 2,643 ಕೋಟಿ ರೂಪಾಯಿ ಮೊತ್ತದ ಐದು ಯೋಜನೆಗಳ ವಿಶೇಷ ಆರ್ಥಿಕ ಪ್ಯಾಕೇಜ್ನ ಭಾಗವಾಗಿದೆ ಈ ಕಟ್ಟಡ. ನಿಗದಿತ ಸಮಯದೊಳಗೆ ಮತ್ತು ನಿಗದಿಗಿಂತ ಕಡಿಮೆ ಮೊತ್ತದಲ್ಲಿ ಕಟ್ಟಡ ಕಾಮಗಾರಿ ಪೂರ್ಣವಾಗಿದೆ. 10 ಅಂತಸ್ತುಗಳಿವೆ. 4,700 ಚದರ ಮಿಟರ್ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಿದೆ. (ಏಜೆನ್ಸೀಸ್)