ಏಷ್ಯಾದ ನಂ.1 ಏರ್​ಪೋರ್ಟ್: ಜೇವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ

Airport
ಹೊಸ ವಿಮಾನ ನಿಲ್ದಾಣದ ನೀಲಿನಕ್ಷೆ
Published on

ನೋಯ್ಡಾ: ಉತ್ತರ ಪ್ರದೇಶದ ಗೌತಮ ಬುದ್ಧನಗರದ ನೋಯ್ಡಾ ಬಳಿಯ ಜೇವರ್​ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ವಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೂಮಿ ಪೂಜೆ ನೆರವೇರಿಸಿದರು. ಇದು ದೆಹಲಿಯಿಂದ ವಿಮಾನ ನಿಲ್ದಾಣದಿಂದ 80 ಕಿ.ಮೀ. ದೂರದಲ್ಲಿರುವುದರಿಂದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್ ಮೇಲಿನ ಒತ್ತಡ ಕಡಿಮೆ ಆಗಲಿದೆ. ಜತೆಗೆ ರಾಷ್ಟ್ರ ರಾಜಧಾನಿ ಬಳಿಯಲ್ಲೇ ಇನ್ನೊಂದು ಸುಸಜ್ಜಿತ ವಿಮಾನ ನಿಲ್ದಾಣ ದೊರೆಯಲಿದೆ. ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂದಿಯಾ, ರಾಜ್ಯ ಖಾತೆ ಸಚಿವ ನಂದ ಗೋಪಾಲ್ ಗುಪ್ತಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಇನ್ನಿತರ ಸಚಿವರು ಭಾಗಿಯಾಗಿದ್ದರು. ನೂರಾರು ಜನರು ಬೈಕ್, ಕಾರು, ಟ್ರಾ್ಯಕ್ಟರ್​ಗಳಲ್ಲಿ ಆಗಮಿಸಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮೋದಿ ಭಾಷಣದ ಮುಖ್ಯಾಂಶ

  1. ಉತ್ತರ ಭಾರತದ ಸರಕು ಸೇವೆಗೆ ಈ ವಿಮಾನ ನಿಲ್ದಾಣ ಹೆಬ್ಬಾಗಿಲಾಗಲಿದೆ. ರಾಷ್ಟ್ರೀಯ ಗತಿಶಕ್ತಿ ಮಾಸ್ಟರ್ ಪ್ಲಾ್ಯನ್​ಗೆ ಇದು ಅತ್ಯಂತ ಬಲಿಷ್ಠ ದ್ಯೋತಕವಾಗಿದೆ.
  2. ಸ್ವಾತಂತ್ರ್ಯ ಬಂದ ಏಳು ದಶಕದ ಬಳಿಕ ಉತ್ತರ ಪ್ರದೇಶದಲ್ಲಿ ಏನು ಆಗಬೇಕಿತ್ತೋ ಅದು ಈಗ ಅಗುತ್ತಿದೆ. ಇದು ಡಬಲ್ ಇಂಜಿನ್ ಸರ್ಕಾರದಿಂದ ಕೈಗೊಡುತ್ತಿದೆ.
  3. ಉತ್ತರ ಪ್ರದೇಶದ ಅನೇಕ ಸ್ಥಳಗಳು ರಾಷ್ಟ್ರೀಯವಾಗಿ ಮಾತ್ರ ವಲ್ಲ, ಅಂತಾರಾಷ್ಟೀಯವಾಗಿ ಹೆಗ್ಗುರುತಾಗಿವೆ, ಆಗಲಿವೆ.
  4. ದೆಹಲಿ ಎನ್​ಸಿಆರ್ ಮತ್ತು ಉತ್ತರ ಪ್ರದೇಶದ ಕೋಟ್ಯಂತರ ಜನರಿಗೆ ಈ ವಿಮಾನ ನಿಲ್ದಾಣದಿಂದ ಅನುಕೂಲ ಆಗಲಿದೆ.

8 ಏರ್​ಪೋರ್ಟ್: ಮುಂದಿನ ಮೂರು ವರ್ಷದಲ್ಲಿ ಜೇವರ್, ಅಯೋಧ್ಯೆ, ಅಲಿಗಢ, ಚಿತ್ರಕೂಟ, ಅಜಂಗಢ, ಮೊರಾದಾಬಾದ್, ಶ್ರಾವಸ್ತಿ, ಮುಯಿರ್ಪರಗಳಲ್ಲಿ ಹೊಸ ಏರ್​ಪೋರ್ಟ್ ಸಿದ್ಧವಾಗಲಿವೆ. ಇತ್ತೀಚೆಗೆ ಕುಶಿನಗರ ವಿಮಾನ ನಿಲ್ದಾಣವನ್ನು ಪ್ರಧಾನಿ ಉದ್ಘಾಟಿಸಿದ್ದರು.

ವಿಮಾನ ನಿಲ್ದಾಣದ ವಿಶೇಷ

  • ಒಟ್ಟಾರೆ 34 ಸಾವಿರ ಕೋಟಿ ರೂ. ಹೂಡಿಕೆಯನ್ನು ಸರ್ಕಾರ ನಿರೀಕ್ಷಿಸಿದೆ.
  • ಮೊದಲ ಹಂತದಲ್ಲಿ 8,914 ಕೋಟಿ ರೂ. ಹೂಡಿಕೆಯ ಅಂದಾಜು.
  • ಮೊದಲ ಹಂತದಲ್ಲಿ 2 ರನ್ ವೇಗಳ ನಿರ್ವಣ.
  • ಜ್ಯೂರಿಚ್ ಏರ್​ಪೋರ್ಟ್ ಇಂಟರ್​ನ್ಯಾಷನಲ್ ಎಜಿಯಿಂದ ಕಾಮಗಾರಿ.
  • ದೆಹಲಿ, ನೋಯ್ಡಾ, ಗಾಜಿಯಾಬಾದ್, ಅಲಿಗಢ, ಆಗ್ರಾ, ಫರೀದಾಬಾದ್ ನಗರ ಮತ್ತು ಆಸುಪಾಸಿನ ಪ್ರದೇಶದ ಜನರಿಗೆ ಅನುಕೂಲ.
  • ದೇಶದಲ್ಲೇ ಮೊದಲ ಬಾರಿಗೆ ಬಹುಮಾದರಿಯ ಸರಕು ಸೇವೆಯ ‘ಕಾಗೋ ಹಬ್’ ಆಗಿ ವಿಮಾನ ನಿಲ್ದಾಣದ ವಿನ್ಯಾಸ.
  • ಉದ್ದೇಶಿತ ದೆಹಲಿ-ವಾರಾಣಸಿ ಹೈಸ್ಪೀಡ್ ರೈಲು ಯೋಜನೆಗೆ ಸಂಪರ್ಕ. ರೈಲು ನಿಲ್ದಾಣಕ್ಕೆ ಏರ್​ಪೋರ್ಟ್​ನಿಂದ 21 ನಿಮಿಷದ ಪ್ರಯಾಣ.
  • ಏರ್​ಪೋರ್ಟ್ ಬಳಿ ಬಹುಮಾದರಿಯ ಸಾರಿಗೆ ಸಂಕೀರ್ಣ. ಬಸ್, ಟ್ಯಾಕ್ಸಿ, ಮೆಟ್ರೋ ರೈಲು ನಿಲ್ದಾಣ, ಖಾಸಗಿ ರ್ಪಾಂಗ್ ನಿರ್ವಣ.
  • ಈ ಏರ್​ಪೋರ್ಟ್ ಮೂಲಕ 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹೊಂದಲಿರುವ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶ ಆಗಲಿದೆ.
  • ದೆಹಲಿ ಎನ್​ಸಿಆರ್ ವ್ಯಾಪ್ತಿಯಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಲಿದೆ.
  • ಲಖನೌ ಸೇರಿದಂತೆ ಉ.ಪ್ರದೇಶದ ಪಶ್ಚಿಮ ಭಾಗ ದಲ್ಲಿ ಶೇ. 15 ವಿಮಾನ ಸಂಚಾರ ದಟ್ಟಣೆ ತಗ್ಗಲಿದೆ.
  • ದೇಶದ ಮೊದಲ ನೆಟ್-ಝಿರೋ ಎಮಿಷನ್ ವಿಮಾನ ನಿಲ್ದಾಣ.
  • ಯಮುನಾ ಎಕ್ಸ್​ಪ್ರೆಸ್ ವೇ, ವೆಸ್ಟ್ರನ್ ಪೆರಿಫೆರಲ್ ಎಕ್ಸ್​ಪ್ರೆಸ್ ವೇ, ಈಸ್ಟ್ರನ್ ಪೆರಿಫೆರಲ್ ಎಕ್ಸ್​ಪ್ರೆಸ್ ವೇ, ದೆಹಲಿ-ಮುಂಬೈ ಎಕ್ಸ್​ಪ್ರೆಸ್ ವೇಗಳ ಸಂಪರ್ಕ.
  • ‘ಸ್ಟೇಟ್ ಆಫ್ ಆರ್ಟ್’ ಎಂಆರ್​ಒ (ನಿರ್ವಹಣೆ, ದುರಸ್ತಿ ಮತ್ತು ಸಮಗ್ರ ಪರೀಕ್ಷೆ) ಸಂಕೀರ್ಣ.
  • 20 ಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಸಾಮರ್ಥ್ಯ. 80 ಲಕ್ಷ ಮೆಟ್ರಿಕ್ ಟನ್​ವರೆಗೂ ವಿಸ್ತರಣೆ ಅವಕಾಶ.
  • ಎರಡನೇ ಹಂತದಲ್ಲಿ 1,365 ಹೇಕ್ಟೆರ್​ನಲ್ಲಿ ಕಾಮಗಾರಿ, 3ನೇ ರನ್ ವೇ ನಿರ್ವಣ.
  • ಮೂರನೇ ಹಂತದಲ್ಲಿ 1,318 ಹೇಕ್ಟೆರ್ ಕಾಮಗಾರಿ, 4 ಮತ್ತು 5ನೇ ರನ್ ವೇ ನಿರ್ವಣ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net