ಪ್ರಧಾನಿ ಮೋದಿ ಚುನಾವಣೆಗೆ ಮುನ್ನ ಬಂಗಾಳಕ್ಕೆ ಭೇಟಿ ನೀಡಿದ ವಲಸೆ ಹಕ್ಕಿಯಂತೆ: ಸಿಎಂ ಮಮತಾ ಬ್ಯಾನರ್ಜಿ| Mamata Banerjee

Mamata Banerjee 26
Published on

Mamata Banerjee: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತಿಗಳನ್ನು ಓಡಿಸಿದರು, ಬಂಗಾಳಿಗಳನ್ನು ಹೊರಹಾಕಲು ಸಾಧ್ಯವಾಗಲಿಲ್ಲ. ಏಕೆಂದರೆ, ಹಾರ್ವರ್ಡ್, ಆಕ್ಸ್‌ಫರ್ಡ್, ಕೊಲಂಬಿಯಾ, ಸ್ಯಾನ್ ಫ್ರಾನ್ಸಿಸ್ಕೋದಂತಹ ಸ್ಥಳಗಳು ಬಂಗಾಳಿಗಳಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಟೀಕಿಸಿದ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪುರ್ಬಾ ಬರ್ಧಮಾನ್ ಜಿಲ್ಲೆಯ ಬರ್ಧಮಾನ್ ಪಟ್ಟಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಭ್ರಷ್ಟಾಚಾರವನ್ನು ನಿರ್ಲಕ್ಷಿಸಿ ಬಂಗಾಳದ ಜನರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಅಲ್ಲದೆ, ಪಶ್ಚಿಮ ಬಂಗಾಳವು ಹೊರಗಿನಿಂದ ಬಂದ ಸುಮಾರು 1.5 ಕೋಟಿ ಜನರಿಗೆ ನೆಲೆಯಾಗಿದೆ. ಬಂಗಾಳಿಗಳನ್ನು ಬೇರೆ ರಾಜ್ಯಗಳಲ್ಲಿ ನಡೆಸಿಕೊಳ್ಳುವ ಮತ್ತು ಹಿಂಸಿಸುವ ರೀತಿಯಲ್ಲಿ ನಾವು ನಡೆಸಿಕೊಳ್ಳುವುದಿಲ್ಲ ಎಂದು ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮುನ್ನ ಬಂಗಾಳಕ್ಕೆ ಭೇಟಿ ನೀಡಿದ ವಲಸೆ ಹಕ್ಕಿಯಂತೆ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.

ಮುಂಬರುವ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಗ್ಗೆ ಮಾತನಾಡಿದರು ಮಮತಾ, ಅಲ್ಲಿ ಆರೋಗ್ಯ ವಿಮೆ ಮತ್ತು ಹಲವಾರು ಸರಕುಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡುವ ಪ್ರಸ್ತಾಪವನ್ನು ಚರ್ಚಿಸುವ ನಿರೀಕ್ಷೆಯಿದೆ. ಆರೋಗ್ಯ ವಿಮಾ ಕಂತುಗಳ ಮೇಲೆ ಜಿಎಸ್‌ಟಿ ವಿನಾಯಿತಿಗಾಗಿ ಒತ್ತಾಯಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ ಎಂದು ಸಭಿಕರಿಗೆ ನೆನಪಿಸಿದರು.

ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿ ಮನ್ನಾದಿಂದ ಬಂಗಾಳಕ್ಕೆ 900 ಕೋಟಿ ರೂ. ನಷ್ಟವಾಗುತ್ತದೆ. ಆದರೆ ನಾವು ಜನರಿಗೆ ಮೊದಲ ಸ್ಥಾನ ನೀಡಬೇಕಾಗಿತ್ತು. ಈ ಸುಧಾರಣೆಯು ವೈದ್ಯಕೀಯ ರಕ್ಷಣೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ ಮತ್ತು ಹೆಚ್ಚಿನ ನಾಗರಿಕರು ಆರೋಗ್ಯ ವಿಮೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ದಿದಿ ಹೇಳಿದರು.

ಪಶ್ಚಿಮ ಬಂಗಾಳದಾದ್ಯಂತ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ರಕ್ಷಣೆಯನ್ನು ಒದಗಿಸುವ ಸ್ವಾಸ್ಥ್ಯ ಸತಿ ಯೋಜನೆಯನ್ನು ವಿಸ್ತರಿಸಲು ತಮ್ಮ ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಬ್ಯಾನರ್ಜಿ ಜನರ ಮುಂದಿಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net