

Rajnath Singh: ನೌಕಾಪಡೆಯ ಪಾತ್ರವು ಸಮುದ್ರದ ರಕ್ಷಣೆಗೆ ಸೀಮಿತವಾಗಿಲ್ಲ. ಅಲ್ಲದೆ, ಎರಡು ಬಹು-ಮಿಷನ್ ಸ್ಟೆಲ್ತ್ ಫ್ರಿಗೇಟ್‌ಗಳನ್ನು ಹಾಗೂ ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ (ಆಗಸ್ಟ್,26) ಕಾರ್ಯಾರಂಭ ಮಾಡಿದರು.
ಈ ಬಗ್ಗೆ ಮಾತನಾಡಿದ ರಕ್ಷಣಾ ಸಚಿವರು, ನೌಕಪಡೆಯು ತೈಲ, ನೈಸರ್ಗಿಕ ಅನಿಲದಂತಹ ಭಾರತೀಯ ಇಂಧನ ಅವಶ್ಯಕತೆಗಳು ಹೆಚ್ಚಿನ ಪ್ರಮಾಣದ ಪ್ರದೇಶದ ಭದ್ರತೆಯನ್ನು ಅವಲಂಬಿಸಿರುವುದರಿಂದ ಅದು ಆರ್ಥಿಕ ಭದ್ರತೆಯ ಪ್ರಮುಖ ಆಧಾರಸ್ತಂಭವಾಗಿದೆ ಎಂದು ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೆ, ಐಎನ್ಎಸ್ ಉದಯಗೀರ್ ಮತ್ತು ಐಎನ್ಎಸ್ ಹಿಮಗಿರಿಯ ಕಾರ್ಯಾರಂಭವು ಸ್ವಾವಲಂಬಿ ಭಾರತದ ನಮ್ಮ ಕನಸು ನನಸಾಗುವುದರ ದೃಶ್ಯ ಚಿತ್ರಣವಾಗಿದೆ. ಇದು ನಮ್ಮ ದೃಷ್ಟಿಕೋನ ಮತ್ತು ಬದ್ಧತೆಗೆ ಪುರಾವೆಯಾಗಿದೆ ಎಂದು ರಾಜ್ನಾಥ್ ಸಿಂಗ್ ಹೇಳಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಮಾತನಾಡಿದ ರಕ್ಷಣಾ ಸಚಿವರು, ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಗಡಿಯಾಚೆಗಿನ ಸೇನಾ ದಾಳಿಯಾದ ಆಪರೇಷನ್ ಸಿಂಧೂರ ಮೂಲಕ ದೇಶವು ಪರಿಣಾಮಕಾರಿ ಮತ್ತು ನಿಖರವಾದ ಪ್ರತಿಕ್ರಿಯೆಯನ್ನು ನೀಡಿತು ಎಂದು ಹೇಳಿದರು.
ಭಾರತ ಎಂದಿಗೂ ಶಕ್ತಿಯನ್ನು ಪ್ರದರ್ಶಿಸುವುದರಲ್ಲಿ ನಂಬಿಕೆ ಇಡುವುದಿಲ್ಲ ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡಿಲ್ಲ. ನಮ್ಮ ಭದ್ರತೆಗೆ ಬೆದರಿಕೆ ಬಂದಾಗ, ಸೂಕ್ತ ಪ್ರತಿಕ್ರಿಯೆ ನೀಡುವುದು ಹೇಗೆ ಎಂದು ನಮಗೆ ತಿಳಿದಿದೆ ಎಂದು ಸಿಂಗ್ ತಿಳಿಸಿದ್ದಾರೆ.
ಈ ಎರಡು ಬಹು ಮಿಷನ್ ಸ್ಟೆಲ್ತ್ ಫ್ರಿಗೇಟ್‌ಗಳನ್ನು ನಿಯೋಜಿಸಿದ ಮಾತನಾಡಿದ ರಾಜನಾಥ್ ಸಿಂಗ್, ಭಾರತ ಎಂದಿಗೂ ಆಕ್ರಮಣಕಾರಿ ವಿಸ್ತರಣಾವಾದವನ್ನು ನಂಬುವುದಿಲ್ಲ. ಇದುವರೆಗೆ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಹೇಳಿದರು. ತನ್ನ ಭದ್ರತೆಯ ಮೇಲೆ ದಾಳಿಯಾದಾಗ, ಭಾರತವು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿದೆ.
ಇಲ್ಲಿನ ಭೌಗೋಳಿಕ-ಕಾರ್ಯತಂತ್ರದ ಪರಿಸ್ಥಿತಿಯು ನಮ್ಮ ಆರ್ಥಿಕ ಅಭಿವೃದ್ಧಿಯ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ನಮ್ಮ ಇಂಧನ ಅವಶ್ಯಕತೆಗಳು, ತೈಲ, ನೈಸರ್ಗಿಕ ಅನಿಲ, ಎಲ್ಲವೂ ಈ ಪ್ರದೇಶದ ಭದ್ರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿವೆ. ನೌಕಾಪಡೆಯ ಪಾತ್ರವು ಸಮುದ್ರದ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಆದರೆ ಇದು ನಮ್ಮ ರಾಷ್ಟ್ರೀಯ ಆರ್ಥಿಕ ಭದ್ರತೆಯ ಪ್ರಮುಖ ಆಧಾರಸ್ತಂಭವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಎರಡು ಹೊಸ ಯುದ್ಧನೌಕೆಗಳ ಕುರಿತು ಮಾತನಾಡಿದ ರಾಜನಾಥ್ ಸಿಂಗ್, ಐಎನ್ಎಸ್ ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿಗಳ ಕಾರ್ಯಾರಂಭವು ಭಾರತೀಯ ನೌಕಾಪಡೆಯ ಶಕ್ತಿ, ವ್ಯಾಪ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಿದರು.
ಐಎನ್‌ಎಸ್ ಉದಯಗಿರಿ ಮತ್ತು ಐಎನ್‌ಎಸ್ ಹಿಮಗಿರಿಯನ್ನು ನಿಯೋಜಿಸುವುದು ಆತ್ಮನಿರ್ಭರ ಭಾರ ಕಡೆಗೆ ಒಂದು ಕನಸು ನನಸಾಗಿದೆ. ಈ ಎರಡೂ ಯುದ್ಧನೌಕೆಗಳು ದೇಶದ ಭದ್ರತೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಅವರು ಹೇಳಿದರು.(ಏಜೆನ್ಸೀಸ್)