VIDEO: ಜನೌಷಧಿ ಪರಿಯೋಜನಾ ಫಲಾನುಭವಿ ಮಹಿಳೆಯ ಮಾತು ಕೇಳಿ ಕಣ್ಣಲ್ಲಿ ನೀರು ತುಂಬಿಕೊಂಡು, ತಲೆ ತಗ್ಗಿಸಿ ನಿಂತ ಪ್ರಧಾನಿ ಮೋದಿ

PM 7 March 20
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ(ಪಿಎಂಬಿಜೆಪಿ) ಫಲಾನುಭವಿಗಳೊಂದಿಗೆ ನಡೆಸಿದ ಸಂವಾದ ಭಾವನಾತ್ಮಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯ್ತು. ಮೋದಿಯವರು ಕಣ್ಣೀರು ಹಾಕಿದ ಘಟನೆ ನಡೆಯಿತು.

ಸರ್ಕಾರದ ಆರೋಗ್ಯ ಯೋಜನೆಯಾದ ಪಿಎಂಬಿಜೆಪಿ ಸಂವಾದದಲ್ಲಿ ಪಾಲ್ಗೊಂಡಿದ್ದ ಮಹಿಳೆಯೋರ್ವರು ಮಾತನಾಡುತ್ತ ಅತ್ತರು. ಅವರನ್ನು ನೋಡಿ ಮೋದಿಯವರೂ ಕಣ್ಣೀರು ಹಾಕಿ, ಒಂದು ಕ್ಷಣ ಮೌನಕ್ಕೆ ಜಾರಿದರು. ತಲೆ ತಗ್ಗಿಸಿ ನಿಂತರು.

ಈ ಯೋಜನೆಯಿಂದ ತಮಗೆಷ್ಟು ಅನುಕೂಲವಾಗಿದೆ ಎಂದು ವಿವರಿಸಿದ ಮಹಿಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಮನತುಂಬಿ ಹೊಗಳಿದರು. ನಾನು ದೇವರನ್ನು ನೋಡಿಲ್ಲ. ಆದರೆ ನಿಮ್ಮನ್ನೇ ದೇವರೆಂದು ಭಾವಿಸುತ್ತೇನೆ. ನಿಮಗೆ ಅನಂತಾನಂತ ಕೃತಜ್ಞತೆಗಳು ಎಂದು ಪ್ರಧಾನಿಯವರಿಗೆ ಹೇಳುತ್ತ ಮಹಿಳೆ ಅಳುತ್ತಾರೆ. ಈ ವೇಳೆ ನರೇಂದ್ರ ಮೋದಿಯವರ ಕಣ್ಣಲ್ಲೂ ನೀರು ಬರುತ್ತದೆ. ಈಕೆ ಉತ್ತರಖಾಂಡದ ಡೆಹ್ರಾಡೂನ್​ನ ದೀಪಾ ಸಿಂಗ್​ ಎನ್ನಲಾಗಿದೆ.

ಬಡಜನರಿಗೆ ಕಡಿಮೆ ದರದಲ್ಲಿ ಔಷಧಿಗಳನ್ನು ಒದಗಿಸುವ ಯೋಜನೆಯಾದ ಜನೌಷಧಿ ಕೇಂದ್ರದಿಂದ ಅನೇಕರು ಅನುಕೂಲ ಪಡೆದುಕೊಂಡಿದ್ದಾರೆ. ಅಂತಹ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದರು.

ಈ ಬಾರಿ ಸಂವಾದದ ವೇಳೆ ಕೊರೊನಾ ವೈರಸ್ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net