

28 ವರ್ಷಗಳ ಹಿಂದೆ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಗೊಳಿಸಬೇಕೆಂದು ಬಿಜೆಪಿ ನಾಯಕರು ಕರೆಕೊಟ್ಟಿದ್ದ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲೆಂದು ಮೋದಿ ಅಯೋಧ್ಯೆಗೆ ಬಂದಿದ್ದರು.
ಅವರು ಈ ಯಾತ್ರೆಯ ಸಂಚಾಲಕರಾಗಿದ್ದರು. ನಂತರದಲ್ಲಿ ಬಂದಿದ್ದು ಈಗ ಮಂದಿರ ಭೂಮಿಪೂಜೆಗಾಗಿಯೇ. ಕಳೆದ ವರ್ಷದ ಆಗಸ್ಟ್ 5ರಂದೇ 370ನೇ ವಿಧಿ ರದ್ದತಿಯ ತೀರ್ವನವನ್ನು ಕೇಂದ್ರ ಪ್ರಕಟಿಸಿತ್ತು. ಇದಾಗಿ ಒಂದು ವರ್ಷ ಪೂರ್ಣಗೊಂಡ ದಿನದಂದೇ ಮೋದಿ ಅಯೋಧ್ಯೆಗೆ ಬಂದಿದ್ದು ಮತ್ತು ಮಂದಿರ ನಿರ್ವಣಕ್ಕೆ ಅಡಿಗಲ್ಲು ಹಾಕಿರುವುದು ವಿಶೇಷ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗದೇ ಈ ನಗರಕ್ಕೆ ಬರಲಾರೆ ಎಂದು 1992ರಲ್ಲಿ ಮೋದಿ ಹೇಳಿದ್ದರು. 2019ರ ಲೋಕಸಭೆ ಚುನಾವಣೆ ವೇಳೆ ಅಯೋಧ್ಯೆಯಿಂದ 34 ಕಿಮೀ ದೂರದಲ್ಲಿರುವ ಫೈಜಾಬಾದ್-ಅಂಬೇಡ್ಕರ್ ನಗರ ಗಡಿ ಭಾಗಕ್ಕೆ ಭೇಟಿ ನೀಡಿದ್ದರೆ ವಿನಾ ಅಯೋಧ್ಯೆಯಲ್ಲಿ ಅವರು ಚುನಾವಣಾ ಪ್ರಚಾರ ಕೈಗೊಂಡಿರಲಿಲ್ಲ.