

ನವದೆಹಲಿ: ಕೇಂದ್ರಿಯ ತನಿಖಾ ದಳ(CBI) ಈಗ ಸತ್ಯ-ನ್ಯಾಯದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ನಾಗರೀಕರಿಗೆ ಹೊಸ ಭರವಸೆಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
CBI ವಜ್ರ ಮಹೋತ್ಸವ ಕಾರ್ಯಕ್ರಮವ್ವು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಿಬಿಐ ಸಾಮಾನ್ಯ ಜನರಿಗೆ ಭರವಸೆ ಮತ್ತು ಶಕ್ತಿಯನ್ನು ನೀಡಿದೆ. ಸತ್ಯ-ನ್ಯಾಯದ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವುದರಿಂದ ಜನರು CBI ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾರೆ.
ಪ್ರಜಾಪ್ರಭುತ್ವ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಭ್ರಷ್ಠಾಚಾರ ದೊಡ್ಡ ತೊಡಕಾಗಿ ಪರಿಣಮಿಸಿದ್ದು ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದೆ CBIನ ಮುಖ್ಯ ಧ್ಯೇಯ. ಕಳೆದ ಆರು ದಶಕಗಳಲ್ಲಿ CBI ದಕ್ಷ ಬಹು ಆಯಾಮದ ಶಿಸ್ತಿನ ಸಂಸ್ಥೆ ಎಂದು ಗುರುತಿಸಿಕೊಂಡಿದೆ ಎಂದು ಶ್ಲಾಘಿಸಿದ್ದಾರೆ.
ಒಂದು ಕಾಲದಲ್ಲಿ ದೇಶದಲ್ಲಿ ಅಪನಂಬಿಕೆ ಹಾಗೂ ನೀತಿಗಳಲ್ಲಿ ದೋಷ ಇತ್ತು. 2014ರ ಬಳಿಕ ಜನರ ನಂಬಿಕೆಯನ್ನು ಪೋಷಿಸಿ ಬಲಪಡಿಸಲಾಗುತ್ತಿದೆ ಎಂದು CBI ವಜ್ರ ಮಹೋತ್ಸವದಲ್ಲಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಹೇಳಿದ್ಧಾರೆ.