ಪ್ರಧಾನಿ ಮೋದಿ ಅವರ ಪದವಿ ದಾಖಲೆಗಳನ್ನು ಹೊಸ ಸಂಸತ್​ ಭವನದ ಎದುರು ಪ್ರದರ್ಶಿಸಿ: ಸಂಜಯ್​ ರಾವುತ್​

Sanjay Raut
Published on

ನವದೆಹಲಿ: ಪಧಾನಿ ನರೇಂದ್ರ ಮೋದಿ ಅವರ ಪದವಿ ದಾಖಲೆಗಳನ್ನು ಹೊಸ ಸಂಸತ್​ ಭವನದ ದ್ವಾರದಲ್ಲಿ ಪ್ರದರ್ಶನಕ್ಕೆ ಇಡಬೇಕು ಎಂದು ಶಿವಸೇನೆ(ಉದ್ಧವ್​ ಠಾಕ್ರೆ ಬಣ) ಸಂಸದ ಸಂಜಯ್​ ರಾವುತ್​ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಜಯ್​ ರಾವುತ್​​ ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ದಾಖಲೆಗಳನ್ನು ಏಕೆ ಗೌಪ್ಯವಾಗಿರಿಸಲಾಗಿದೆ. ಇದು ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ ಎಂದು ಹೇಳಿದ್ಧಾರೆ.

ಕೆಲವರು ಪ್ರಧಾನಿ ಅವರು ಪದವಿ ಪಡೆದಿರುವುದು ಸುಳ್ಳು ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯಶಾಸ್ತ್ರದಲ್ಲಿ ಪದವಿ ಪಡೆಯುವುದು ಐತಿಹಾಸಿಕ ಮತ್ತು ಕ್ರಾಂತಿಕಾರಿ. ಆದ್ದರಿಂದ ಅವರ ಪದವಿ ಪ್ರಮಾಣ ಪತ್ರಗಳನ್ನು ನೂತನ ಸಂಸತ್​ ಭನವದ ದ್ವಾರದಲ್ಲಿ ಪ್ರದರ್ಶಿಸಬೇಕು ಎಂದಿದ್ದಾರೆ.

ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪ್ರಧಾನಿ ಮೋದಿ ಅವರ ಪದವಿ ವಿವರ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಗುಜರಾತ್​​ ನ್ಯಾಯಾಲಯ 25,000 ಸಾವಿರ ರೂಪಾಯಿ ದಂಡ ವಿಧಿಸಿದ ಕುರಿತು ಪ್ರತಿಕ್ರಿಯಿಸಿರುವ ರಾವುತ್​ ಅದರಲ್ಲಿ ಮುಚ್ಚಿಡುವಂಥದ್ದು ಏನಿದೆ. ಈ ಕುರಿತು ಸ್ವತಃ ಪ್ರಧಾನಿ ಅವರೇ ಖುದ್ದು ಸ್ಪಷ್ಟನೆ ನೀಡಬೇಕೆಂದು ಎಂದು ಸಂಜಯ್​ ರಾವುತ್​ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net