

ನವದೆಹಲಿ: ಮೇ.14 ರಂದು ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಸ್ಪರ್ಧೆಗೆ ಇಳಿದಿದ್ದು, ಅಧಿಕ ಮತಗಳಿಂದ ಗೆದ್ದು ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಮುಂದುವರೆಯಲು ಸಜ್ಜಾಗಿದ್ದಾರೆ.
ಮೇ 14ರಂದು ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ನಾಳೆ ಕಾಶಿಗೆ ಭೇಟಿ ಕೊಡಲಿರುವ ಪ್ರಧಾನಿ ಮೋದಿ, ಅದ್ದೂರಿ ರೋಡ್ಶೋನಲ್ಲಿ ಭಾಗವಹಿಸಿ, ಜನರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸತತವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಮೋದಿ, ಎಲೆಕ್ಷನ್ಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಯ ಸಲುವಾಗಿ ವಾರಣಾಸಿಯ ಮನೆ ಮನೆಗಳಿಗೆ ಆಹ್ವಾನ ಪತ್ರಿಕೆ ಹಂಚಲಾಗಿದೆ. ನಾಮಿನೇಷನ್ ವೇಳೆ ಇತರೆ ರಾಜ್ಯದ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 5000ಕ್ಕೂ ಅಧಿಕ ಮಹಿಳೆಯರು ಮೋದಿಯವರ ರೋಡ್ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ. ಇದರೊಟ್ಟಿಗೆ ಕಳೆದ 10 ವರ್ಷಗಳಲ್ಲಿ ಕಾಶಿಯಲ್ಲಿನ ಅಭಿವೃದ್ಧಿ ಕೆಲಸಗಳ ಝಲಕ್ ಅನ್ನು ಸಹ ಏರ್ಪಡಿಸಲಾಗಿದೆ,(ಏಜೆನ್ಸೀಸ್).