ಪ್ರಧಾನಿ ಮೋದಿಗೆ ಜೈನ ಆಧ್ಯಾತ್ಮಿಕ ಗುರುಗಳಿಂದ 'ಧರ್ಮ ಚಕ್ರವರ್ತಿ' ಬಿರುದು ಪ್ರದಾನ| Modi

modi
Published on

ನವದೆಹಲಿ: ಜೈನ ಸಂತ ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರ ಶತಮಾನೋತ್ಸವದ ಕಾರ್ಯಕ್ರಮದ ಸಂದರ್ಭದಲ್ಲಿ ಇಂದು (28) ಪ್ರಧಾನಿ ನರೇಂದ್ರ ಮೋದಿ ಅವರಿಗೆ "ಧರ್ಮ ಚಕ್ರವರ್ತಿ" ಎಂಬ ಬಿರುದನ್ನು ನೀಡಲಾಗಿದೆ. ಇನ್ನೂ ಈ ಗೌರವವನ್ನು ಪ್ರಧಾನಿ ಮೋದಿ ನಮ್ರತೆಯಿಂದ ಸ್ವೀಕಾರ ಮಾಡಿದ್ದಾರೆ.

ಶತಮಾನೋತ್ಸವದ ಭಾಗವಾಗಿ, ಪ್ರಧಾನಿ ಮೋದಿ ಮತ್ತು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಆಚಾರ್ಯ ಶ್ರೀ 108 ವಿದ್ಯಾನಂದ ಜಿ ಮಹಾರಾಜ್ ಅವರನ್ನು ಗೌರವಿಸುವ ಸ್ಮರಣಾರ್ಥ ಅಂಚೆ ಚೀಟಿಗಳ ಸರಣಿಯನ್ನು ಬಿಡುಗಡೆ ಮಾಡಿದರು.

ಮೋದಿ ಹೇಳಿದ್ದೇನು.?

1987ರ ಜೂನ್ 28 ರಂದು ಆಚಾರ್ಯ ವಿದ್ಯಾನಂದರಿಗೆ ‘ಆಚಾರ್ಯ’ ಎಂಬ ಬಿರುದು ದೊರೆತಿತ್ತು. ಇದು ಕೇವಲ ಗೌರವವಲ್ಲ, ಬದಲಾಗಿ ಜೈನ ಸಂಸ್ಕೃತಿಯನ್ನು ಸಂಯಮ ಮತ್ತು ಕರುಣೆಗೆ ಸಂಪರ್ಕಿಸುವ ಪವಿತ್ರ ಧಾರ ಎಂದು ಅವರು ಹೇಳಿದರು. ಈ ಆಚರಣೆಗಳು ಶಿಸ್ತುಬದ್ಧ, ತಪಸ್ವಿ ಜೀವನದ ಜ್ಞಾಪನೆ ಎಂದು ಬಣ್ಣಿಸುತ್ತಾ ಆಚಾರ್ಯರಿಗೆ ಮೋದಿ ಗೌರವ ಸಲ್ಲಿಸಿದರು.

ನಾನು ಇದಕ್ಕೆ ಸೂಕ್ತನೆಂದು ಭಾವಿಸುವುದಿಲ್ಲ. ಆದರೆ ನಾವು ಸಂತರಿಂದ ಏನೇ ಸ್ವೀಕರಿಸಿದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದು ನಮ್ಮ ಸಂಸ್ಕೃತಿ. ಹಾಗಾಗಿ, ನಾನು ಈ ಪ್ರಸಾದವನ್ನು ವಿನಮ್ರವಾಗಿ ಸ್ವೀಕರಿಸಿ ಭಾರತ ಮಾತೆಗೆ ಅರ್ಪಿಸುತ್ತೇನೆ ಮೋದಿ ಹೇಳಿದ್ದಾರೆ.

(ಏಜೆನ್ಸೀಸ್)

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮೂಲಕ ಮಾತನಾಡಿದ ಮೋದಿ, ಭಾರತವು ವಿಶ್ವದ ಅತ್ಯಂತ ಹಳೆಯ ಜೀವಂತ ಸಂಸ್ಕೃತಿಯಾಗಿದೆ. ನಮ್ಮ ವಿಚಾರಗಳು, ಆಲೋಚನೆಗಳು ಮತ್ತು ತತ್ವಶಾಸ್ತ್ರವು ಅಮರವಾಗಿರುವುದರಿಂದ ನಾವು ಸಾವಿರಾರು ವರ್ಷಗಳಿಂದ ಜೀವಂತವಾಗಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net