

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, 'ಚಿತ್ರರಂಗದಲ್ಲಿ ಪ್ರಕಾಶಮಾನವಾಗಿ ಬೆಳೆಯುತ್ತಿದ್ದ ಯುವನಟ ಬಹುಬೇಗ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ...' ಎಂದಿದ್ದಾರೆ.
ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ಸುಶಾಂತ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರತಿಭಾವಂತ ನಟನನ್ನು ಕಳೆದುಕೊಂಡ ಬಾಲಿವುಡ್ನಲ್ಲಿ ಕಾರ್ಮೋಡ ಕವಿದಿದೆ. ಬಾಲಿವುಡ್ ದಿಗ್ಗಜರಾದಿಯಾಗಿ... ದೇಶದಾದ್ಯಂತ ಸುಶಾಂತ್ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅಗಲಿದ ನಟನಿಗೆ ಟ್ವಿಟರ್ನಲ್ಲಿ ಪ್ರಧಾನಿ ಸಂತಾಪ ಸೂಚಿಸಿದ್ದು, ಅದರ ವಿವರ ಇಲ್ಲಿದೆ.
ಇದನ್ನೂ ನೋಡಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
''ಸುಶಾಂತ್ ಸಿಂಗ್ ರಜಪೂತ್... ಪ್ರಕಾಶಮಾನವಾಗಿ ಬೆಳೆಯುತ್ತಿದ್ದ ಯುವನಟ ಬಾರದ ಲೋಕಕ್ಕೆ ಬಹುಬೇಗನೇ ಹೋದರು. ಟಿವಿ ಮತ್ತು ಚಲನಚಿತ್ರಗಳಲ್ಲಿ ಉತ್ತಮ ಸಾಧನೆ ತೋರಿದರು. ಮನರಂಜನಾ ಜಗತ್ತಿನಲ್ಲಿ ಸುಶಾಂತ್ ಮಾಡಿದ ಸಾಧನೆ ಹಲವರಿಗೆ ಸ್ಫೂರ್ತಿಯಾಗಿತ್ತು. ಹಲವಾರು ಸ್ಮರಣೀಯ ಪ್ರದರ್ಶನಗಳನ್ನು ನಮ್ಮ ನಡುವೆಯೇ ಬಿಟ್ಟು ಹೋಗಿದ್ದಾರೆ. ಸುಶಾಂತ್ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ. ಓಂ ಶಾಂತಿ'' ಎಂದು ನರೇಂದ್ರ ಮೋದಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ.