ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಈ ರಸ್ತೆಗಳು ಬಂದ್, ಸಂಚಾರ ಮಾರ್ಗ ಬದಲಾವಣೆ…

namma metro
Published on

ಬೆಂಗಳೂರು: ಇಂದು ಪ್ರಧಾನಮಂತ್ರಿ ಮೋದಿ ಬೆಂಗಳೂರು ಪ್ರವಾಸ ಮಾಡುತ್ತಿದ್ದು ನಮ್ಮ ಮೆಟ್ರೋ ಉದ್ಘಾಟನೆಗೆ ಬರಲಿದ್ದಾರೆ. ವೈಟ್ ಫೀಲ್ಡ್ ಮತ್ತು ಕೆಆರ್ ಪುರ ನಡುವಿನ ಮೆಟ್ರೋ ರೈಲುಗೆ ಚಾಲನೆ ನೀಡಲಿದ್ದು ಈ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಇನ್ನೂ ಕೆಲ ಮಾರ್ಗಗಳ ಸಂಚಾರಚವನ್ನು ಮತ್ತೊಂದೆಡೆಗೆ ಸ್ಥಳಾಂತರಿಸಲಾಗಿದೆ.

ವೈಟ್ ಫೀಲ್ಡ್ ಸುತ್ತಮುತ್ತ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದ್ದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ರವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧ ಮುಂದುವರೆಯಲಿದೆ.

ಈ ರಸ್ತೆಗಳಲ್ಲಿ ಸಂಚಾರವೇ ಬಂದ್:

  1. ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ.
  2. ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ.
  3. ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧ.

ಈ ರಸ್ತೆಗಳಲ್ಲಿ ಸಂಚಾರ ಮಾರ್ಪಾಡು:

  1. ವರ್ತೂರುಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್ಪೋರ್ಟ್ ರಸ್ತೆ ತಲುಪುವುದು.
  2. ಚನ್ನಸಂದ್ರ ಸರ್ಕಲ್ ನಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ವರ್ತೂರು ಕೋಡಿ ತಲುಪುವುದು.
  3. ಕಾಟಂನಲ್ಲೂರು ಕ್ರಾಸ್ ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ ಮೂಲಕ ಚನ್ನಸಂದ್ರ.
  4. ಹೂಡಿ ಸರ್ಕಲ್ ನಿಂದ ಗ್ರಾಫೈಟ್ ರಸ್ತೆ ಮೂಲಕ ಕುಂದಲಹಳ್ಳಿ ತಲುಪುವುದು.
  5. ಹೂಡಿ ಸರ್ಕಲ್ ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್ ತಲುಪುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net