ಹೇಗಿರಲಿದೆ ಕೆಆರ್ ಪುರಂ ವೈಟ್‌ಫೀಲ್ಡ್‌ ತನಕದ ಮೆಟ್ರೋ? ಆಗಲಿರುವ ಪ್ರಯೋಜನಗಳು ಹೀಗಿವೆ…

namma metro
ನಮ್ಮ ಮೆಟ್ರೋ
Published on

ಬೆಂಗಳೂರು: ಐಟಿ ಕಾರಿಡಾರಿನಲ್ಲಿ ಇಂದು ಮೊದಲ ಮೆಟ್ರೋ ಮಾರ್ಗ ಲೋಕಾರ್ಪಣೆಗೊಳ್ಳಲಿದ್ದು ಇದರಿಂದಾಗಿ ನಮ್ಮ ಮೆಟ್ರೋ ದೇಶದ ಎರಡನೇ ಅತಿ ದೊಡ್ಡ ಸಂಪರ್ಕಜಾಲ ಉಳ್ಳ ಮೆಟ್ರೋ ಆಗಿ ಹೊರಹೊಮ್ಮಲಿದೆ.

ಸಿಲಿಕಾನ್ ಸಿಟಿಯ ಬಹು ನಿರೀಕ್ಷಿತ ಮೆಟ್ರೋ ಮಾರ್ಗ ಇದಾಗಿದ್ದ ನೇರಳೆ ಮಾರ್ಗದ ವಿಸ್ತೃತ ಮಾರ್ಗ ಆಗಿರುವ ಈ ಲೈನ್ ಅನ್ನು ಮೋದಿ ಉದ್ಘಾಟಿಸಲಿದ್ದಾರೆ. ವೈಟ್‌ಫೀಲ್ಡ್‌ ನಿಲ್ದಾಣದಲ್ಲೇ ನೂತನ ರೈಲಿಗೆ ಹಸಿರು ನಿಶಾನೆ ಸಿಗಲಿದ್ದು ಉದ್ಘಾಟನೆ ಮಾಡಿದ್ದೇ ನೂತನ ಮಾರ್ಗದಲ್ಲಿ ಪ್ರಧಾನಿ ಮೋದಿ ಸಂಚರಿಸಲಿದ್ದಾರೆ.

ಕೆಆರ್ ಪುರಂನಿಂದ ವೈಟ್‌ಫೀಲ್ಡ್‌ವರೆಗಿನ ನೂತನ ಮಾರ್ಗ ಬರೊಬ್ಬರಿ 4500 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ನೂತನ ನೇರಳ ಮಾರ್ಗ 13.75 ಕಿಲೋಮೀಟರ್ ಉದ್ದವಿದೆ. ಈಗಾಗಲೇ ಕೆಆರ್ ಪುರಂನಿಂದ ವೈಟ್,ಫೀಲ್ಡ್ ನಡುವೆ  12 ಮೆಟ್ರೋ ನಿಲ್ದಾಣಗಳನ್ನು ಬಿಎಂಆರ್‌ಸಿಎಲ್ ನಿರ್ಮಿಸಿದೆ. ಈ ಮಾರ್ಗದಿಂದ ಐಟಿ ಕಾರಿಡಾರ್‌ಗೆ ಅನುಕೂಲವಾಗಲಿದ್ದು ಮಾರತ್‌ಹಳ್ಳಿ, ಕೆಆರ್‌ಪುರಂ, ಐಟಿಪಿಎಲ್‌ ಸುತ್ತಮುತ್ತಲೂ ಇರುವ ಐಟಿ ಉದ್ಯೋಗಿಗಳ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಹಾಯವಾಗಲಿದೆ. ಈ ಪ್ರದೇಶದಲ್ಲಿ ಕನಿಷ್ಟ 20ರಿಂದ 25 ಬೃಹತ್ ಕಂಪನಿಗಳಿದ್ದು ಅಲ್ಲಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರೂ ಈಗಲೂ ಕ್ಯಾಬ್ ಹಾಗು ಬಸ್‌ಗಳಲ್ಲಿ ಸಂಚರಿಸುತ್ತಿದ್ದು ಮೆಟ್ರೋ ಆರಂಭಿಸುವುದರಿಂದ ಸಂಚಾರ ದಟ್ಟಣೆ ಕ್ಷೀಣಿಸಲಿದೆ ಎಂದು ಲೆಕ್ಕಹಾಕಲಾಗಿದೆ.

ಮೊದಲನೇ ಹಂತದಲ್ಲಿ ವೈಟ್‌ಫೀಲ್ಡ್‌ - ಕೆಆರ್‌ಪುರಂವರೆಗೂ ರೈಲು ಸಂಚರಿಸಲಿದ್ದು ಮುಂದಿನ 6 ತಿಂಗಳಲ್ಲಿ ಕೆಆರ್‌ಪುರಂ - ಬೈಯಪ್ಪನಹಳ್ಳಿಗೆ ಕಾಮಗಾರಿ ಮುಕ್ತಾಯವಾಗಲಿದೆ. ಅದಾದ ಬಳಿಕ ಚಲ್ಲಘಟ್ಟದಿಂದ ವೈಟ್ ಫೀಲ್ಡ್ ವರೆಗೆ ಮೆಟ್ರೋ ಸಂಚಾರ ಸಾಧ್ಯವಾಗಲಿದೆ ಎನ್ನಲಾಗುತ್ತಿದೆ. ಹೊರವಲಯದಿಂದ ನಗರಕ್ಕೆ ಬರುವವರಿಗೂ ಇದು ಅದ್ಭುತವಾದ ಕನೆಕ್ಟಿವಿಟಿಯ ಮಾರ್ಗವಾಗಿ ಹೊರಹೊಮ್ಮಲಿದೆ.

ಸದ್ಯಕ್ಕೆ ಮೆಟ್ರೋದಲ್ಲಿ ವೈಟ್‌ಫೀಲ್ಡ್‌ - ಕೆಆರ್‌ ಪುರಂ 25 ನಿಮಿಷಗಳಲ್ಲಿ ತಲುಪಬಹುದು. ನೂತನ ಮಾರ್ಗದಲ್ಲಿ ಪ್ರತಿನಿತ್ಯ ಕನಿಷ್ಟ 3 ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆಯಿದ್ದು ಪ್ರತಿ 10 ನಿಮಿಷಗಳಿಗೆ ಒಂದು ಟ್ರೈನ್ ಸೇವೆ ನೀಡಲು ಬಿಎಂಆರ್‌ಸಿಎಲ್ ಸಜ್ಜಾಗಿದೆ. ಪ್ರಾಥಮಿಕವಾಗಿ 7 ರೈಲುಗಳನ್ನು ಬಿಎಂಆರ್‌ಸಿಎಲ್ ಉಪಯೋಗಿಸಲಿದೆ.  ಅಗತ್ಯ ಬಿದ್ದಲ್ಲಿ 6ರಿಂದ 8 ನಿಮಿಷಗಳಿಗೆ ರೈಲು ಸೇವೆ ಕೂಡ ನೀಡಲು ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ನಡುವಿನ ನಿಲ್ದಾಣಗಳು ಯಾವುವು

ವೈಟ್‌ಫೀಲ್ಡ್

ಚನ್ನಸಂದ್ರ

ಕಾಡುಗೋಡಿ ಟ್ರೀ ಪಾರ್ಕ್

ಪಟ್ಟಂದೂರು ಅಗ್ರಹಾರ

ಶ್ರೀಸತ್ಯಸಾಯಿ ಆಸ್ಪತ್ರೆ

ನಲ್ಲೂರಹಳ್ಳಿ

ಕುಂದಲಹಳ್ಳಿ

ಸೀತಾರಾಮಪಾಳ್ಯ

ಹೂಡಿ

ಗರುಡಾಚಾರ್‌ಪಾಳ್ಯ

ಸಿಂಗಯ್ಯನಪಾಳ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net