ಪ್ರಧಾನಿ ಮೋದಿ ಕರೊನಾ ಗಂಭೀರತೆ ಅರ್ಥ ಮಾಡಿಕೊಂಡಿದ್ದಾರೆ, ಸೋಷಿಯಲ್​ ಡಿಸ್ಟನ್ಸ್​ ಪಾಲನೆ ಮಾಡ್ತಿದ್ದಾರೆ...ಹೀಗಿದ್ದಾಗ ನಾವು-ನೀವು?

modi
Published on

ನವದೆಹಲಿ: ಕರೊನಾ ವೈರಸ್​ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಇಡೀ ದೇಶವನ್ನೇ ಲಾಕ್​​ಡೌನ್ ಮಾಡಲಾಗಿದೆ. ಸದ್ಯ ಅದು ಪಸರಿಸುತ್ತಿರುವ ವೇಗ ತಡೆಯಲು ಸಾಮಾಜಿಕ ಅಂತರವೊಂದೇ ಮಾರ್ಗ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು ತಾವೂ ಸ್ವತಃ ಅದನ್ನು ಪಾಲಿಸುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಕರೊನಾ ವೈರಸ್​ ಬಗ್ಗೆ ಚರ್ಚಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ನಿವಾಸದಲ್ಲಿ ಸಚಿವ ಸಂಪುಟದ ಸಭೆ ನಡೆಸಿದ್ದು, ಈ ವೇಳೆ ಭಾಗವಹಿಸಿದ್ದವರೆಲ್ಲ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ. ಒಂದೇ ಟೇಬಲ್​ನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳದೆ ಒಬ್ಬರಿಗೊಬ್ಬರು ಅಂತರದಲ್ಲಿ ಕುಳಿತಿರುವ ಫೋಟೋ ವೈರಲ್​ ಆಗಿದೆ.
ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ನಿಯಂತ್ರಣ, ಲಾಕ್​ಡೌನ್​ಗೆ ಸಂಬಂಧಪಟ್ಟ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದುವರದಿಯಾಗಿದೆ.

ಸದ್ಯ ಭಾರತದಲ್ಲಿ 560 ಜನರಿಗೆ ಕರೊನಾ ತಗುಲಿದೆ. ಅವರಲ್ಲಿ 40 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ​ಆಗಿದ್ದಾರೆ. ಪರಿಸ್ಥಿತಿ ಕೈ ಮೀರುವ ಮೊದಲು ಎಚ್ಚೆತ್ತುಕೊಳ್ಳೋಣ ಎಂದು ಮೋದಿಯವರು ಪದೇಪದೆ ಎಚ್ಚರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸೋಷಿಯಲ್ ಡಿಸ್ಟನ್ಸ್ ನಲ್ಲಿ ಕ್ಯಾಬಿನೆಟ್ ಮೀಟಿಂಗ್​​​ ನಡೆಸಿದ ಫೋಟೋವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಫೇಸ್​​​ಬುಕ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net