ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ! ಏಕೀಕೃತ ಪಿಂಚಣಿ ಯೋಜನೆಗೆ ಪಿಎಂ ಸಂಪುಟ ಅನುಮೋದನೆ

ವಿಜಯವಾಣಿ (11)
Published on

ನವದೆಹಲಿ: 23 ಲಕ್ಷ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡುವ ಗುರಿಯನ್ನು ಹೊಂದಿರುವ ಏಕೀಕೃತ ಪಿಂಚಣಿ ಯೋಜನೆಯನ್ನು (UPS) ಇಂದು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಅನುಮೋದನೆ ನೀಡಿದೆ. ಹೊಸ ಯೋಜನೆಯು ಗ್ರಾಚ್ಯುಟಿ ಜತೆಗೆ ನಿವೃತ್ತಿಯ ನಂತರ ಒಂದು ದೊಡ್ಡ ಮೊತ್ತದ ಹಣವನ್ನು ಒಳಗೊಂಡಿರುತ್ತದೆ. 25 ವರ್ಷ ಸೇವೆ ಸಲ್ಲಿಸುವ ನೌಕರರು ಈ ಯೋಜನೆಯ ಪೂರ್ಣ ಸವಲತ್ತನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೇಂದ್ರ ತಿಳಿಸಿದೆ.

25 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರತಿಯೊಬ್ಬ ನೌಕರರು ಈ ಪಿಂಚೂಣಿ ಯೋಜನೆಗೆ ಅರ್ಹರಾಗಿರುತ್ತಾರೆ. ಒಂದು ವೇಳೆ ನೌಕರರು ಸೇವೆಯಲ್ಲಿದ್ದಾಗಲೇ ಸಾವಿಗೀಡಾದರೆ ಪಿಂಚೂಣಿಯ 60% ರಷ್ಟು ಪಾಲು ಅವರ ಪತ್ನಿಯರಿಗೆ ಸಿಗುತ್ತದೆ ಎಂದು ಕೇಂದ್ರ ಸಚಿವ ಆಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ ಏಕೀಕೃತ ಪಿಂಚಣಿ ಯೋಜನೆ 2025ರ ಏಪ್ರಿಲ್ 01ರಿಂದ ಜಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net