ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಪ್ರಧಾನಿ; ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

WhatsApp Image 2024-05-12 at 5.23.51 PM
Published on

ರಾಯಬರೇಲಿ: ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ ಸಹೋದರಿ ಪ್ರಿಯಾಂಕಾ ಗಾಂಧಿ, ದೇಶದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.

ಇಂದಿನ ಚುನಾವಣೆ ಪ್ರಚಾರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, "ಪ್ರಧಾನಿ ಮೋದಿ ಅವರು ಇಡೀ ದೇಶದ ಸಂಪತ್ತನ್ನು ನಾಲ್ಕರಿಂದ ಐದು ಶ್ರೀಮಂತರಿಗೆ ಕೊಟ್ಟಿದ್ದಾರೆ. ಕಳೆದ ಹತ್ತು ವರ್ಷಗಳಿಂದ ವಾರಣಾಸಿ ಸಂಸದರಾಗಿರುವ ಪ್ರಧಾನಿಗಳು, ತಮ್ಮ ಕ್ಷೇತ್ರಕ್ಕೆ ಒಂದೇ ಒಂದು ಬಾರಿಯೂ ಭೇಟಿ ಕೊಟ್ಟಿಲ್ಲ, ರೈತರ ಕಷ್ಟಗಳನ್ನು ಆಲಿಸಿಲ್ಲ" ಎಂದು ಹೇಳಿದರು.

"ಇಂದು ದೇಶದ ಇದ್ದಿಲು, ವಿದ್ಯುತ್​, ಪೋರ್ಟ್ಸ್​​ ಮತ್ತು ಏರ್​ಪೋರ್ಟ್ಸ್​​ಗಳೆಲ್ಲವೂ ಪ್ರಧಾನಿ ಮೋದಿ ಅವರ ಆಪ್ತರೊಂದಿಗೆ ಇವೆ. ಪಿಎಂ ಆಯೋಜಿಸುವ ದೊಡ್ಡ ದೊಡ್ಡ ಈವೆಂಟ್​ಗಳಲ್ಲಿ ಶ್ರೀಮಂತರೇ ಇರುತ್ತಾರೆ ವಿನಃ ಒಬ್ಬ ಬಡ ವ್ಯಕ್ತಿಯೂ ಕೂಡ ಕಣ್ಣಿಗೆ ಕಾಣಸಿಗೋದಿಲ್ಲ" ಎಂದು ನೇರ ವಾಗ್ದಾಳಿ ನಡೆಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net