ರಾಜ್ಯಕ್ಕೆ ಬಹುದೊಡ್ಡ ಭರವಸೆ ನೀಡಿದ ಪ್ರಧಾನಿ, ಧನ್ಯವಾದ ತಿಳಿಸಿದ್ರು ಸಿಎಂ ಬೊಮ್ಮಾಯಿ..

PM CM
Published on

ಬೆಂಗಳೂರು: ಮಕರ ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಹುದೊಡ್ಡ ಭರವಸೆಯನ್ನು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಆವಾಸ್​ ಗ್ರಾಮೀಣ ಯೋಜನೆಯಡಿ ಭಾರಿ ಸಂಖ್ಯೆಯ ಹೊಸಮನೆ ಹಾಗೂ ನಿವೇಶನಗಳನ್ನು ಕರ್ನಾಟಕಕ್ಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಈ ಮೂಲಕ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಗೆ ಈಡೇರುವ ಸಮಯ ಸಮೀಪಿಸಿದಂತಾಗಿದೆ.

ಕರ್ನಾಟಕಕ್ಕೆ 18,78,671 ಮನೆಗಳನ್ನು ಹಾಗೂ 6,61,535 ನಿವೇಶನಗಳನ್ನು ಪ್ರಧಾನ ಮಂತ್ರಿ ಆವಾಸ್​ ಗ್ರಾಮೀಣ ಯೋಜನೆಯಡಿ ನೀಡಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net