ಪಾಠ ಮಾಡೋ ಬದಲು ಮೊಬೈಲ್ ಗೇಮ್; ವಿದ್ಯಾರ್ಥಿನಿಯರ ಬಳಿ Instagram ID ಕೇಳಿದ ಶಿಕ್ಷಕ? | Teacher Controversy

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ವಿರುದ್ಧ ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಕ್ಲಾಸ್‌ನಲ್ಲಿ ಪಾಠ ಮಾಡದೆ ಮೊಬೈಲ್ ಗೇಮ್ ಆಡುತ್ತಿದ್ದರು, ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಿದ್ದರು ಎಂದು ದೂರಿದ್ದಾರೆ.
 teacher ask for the Instagram ID
ಸರ್ಕಾರಿ ಶಾಲೆಯ ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರ ಆರೋಪ
Published on: 

Bhind Teacher Controversy: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ವಿರುದ್ಧ ವಿದ್ಯಾರ್ಥಿನಿಯರು ಮಾಡಿರುವ ಆರೋಪ ಇದೀಗ ಚರ್ಚೆಗೆ ಗ್ರಾಸವಾಗಿದೆ. ತರಗತಿಯಲ್ಲಿ ಸರಿಯಾಗಿ ಪಾಠ ಮಾಡದೆ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದರು, ಅಲ್ಲದೆ ವಿದ್ಯಾರ್ಥಿನಿಯರ ಬಳಿ ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಿದ್ದರು ಎಂದು ಶಿಕ್ಷಕರ ವಿರುದ್ಧ ಆರೋಪಿಸಲಾಗಿದೆ.

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಕೋಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಾಯಾಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆಯಲ್ಲಿ ಶಿಕ್ಷಕ ಪ್ರಶಾಂತ್ ವಿರುದ್ಧ ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ವಿದ್ಯಾರ್ಥಿನಿಯರ ಬಳಿ ಇನ್‌ಸ್ಟಾಗ್ರಾಮ್ ಐಡಿ ಕೇಳಿದ್ರಾ?

ಮಾಧ್ಯಮಗಳ ಜತೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು, ಶಿಕ್ಷಕರು ಪಾಠ ಮಾಡುವ ಬದಲು ವಿದ್ಯಾರ್ಥಿನಿಯರ ಬಳಿ ಇನ್‌ಸ್ಟಾಗ್ರಾಮ್ ಐಡಿ ಕೇಳುತ್ತಾರೆ ಎಂದು ಆರೋಪಿಸಿದ್ದಾಳೆ. ‘ಪಾಠ ಮಾಡಲು ಬರ್ತಾರೋ, ಇನ್‌ಸ್ಟಾಗ್ರಾಮ್ ಐಡಿ ಕೇಳಲು ಬರ್ತಾರೋ?’ ಎಂದು ಪ್ರಶ್ನಿಸಿರುವ ಆಕೆ, ‘ಪ್ರಶಾಂತ್ ಸರ್’ ವಿರುದ್ಧ ಈ ಆರೋಪ ಮಾಡಿದ್ದಾಳೆ.

ಕ್ಲಾಸ್‌ನಲ್ಲಿ ಮೊಬೈಲ್ ಗೇಮ್ ಆಡುತ್ತಿದ್ದ ಶಿಕ್ಷಕ?

ಇದೇ ವೇಳೆ, ಶಿಕ್ಷಕರು ತರಗತಿಯಲ್ಲಿ ಪಾಠ ಮಾಡುವ ಬದಲು ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದರು ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ‘ಮಕ್ಕಳಿಗೆ ಪಾಠ ಮಾಡಲ್ಲ, ಟೇಬಲ್ ಮೇಲೆ ಕಾಲು ಇಟ್ಟುಕೊಂಡು ಗೇಮ್ ಆಡುತ್ತಾರೆ’ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಈ ಆರೋಪಗಳಿಗೆ ಬಗ್ಗೆ ಶಿಕ್ಷಕ ಪ್ರಶಾಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಘಟನೆಯ ಬಗ್ಗೆ ತನಿಖೆ

ಶಿಕ್ಷಕರ ವಿರುದ್ಧ ಕೇಳಿಬಂದಿರುವ ಆರೋಪಗಳು ಶಾಲೆಯ ಬೋಧನಾ ವ್ಯವಸ್ಥೆ ಹಾಗೂ ಶಿಸ್ತಿನ ಬಗ್ಗೆ ಪ್ರಶ್ನೆ ಮೂಡಿಸಿವೆ. ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲೂ ಆತಂಕ ವ್ಯಕ್ತವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ವಯಸ್ಸು 65 ಆದರೂ ಛಲ ಕುಗ್ಗಿಲ್ಲ; ಆಟೋ ಓಡಿಸುತ್ತಿರುವ ಅಜ್ಜಿಯ ವಿಡಿಯೋ ವೈರಲ್! | Elderly woman auto driver

ಆದರೆ, ಆರೋಪಗಳ ಕುರಿತು ಅಧಿಕೃತ ತನಿಖೆ ಆರಂಭಿಸಲಾಗಿದೆಯೇ ಅಥವಾ ಶಿಕ್ಷಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net