ವಿದ್ಯಾರ್ಥಿಗಳಿಂದ ಭತ್ತದ ಗದ್ದೆಯಲ್ಲಿ ನಾಟಿ

Kodachadri School students Paddy Planting
ಸಾಗರ ತಾಲೂಕಿನ ಗಿಣಿವಾರ ಗ್ರಾಮದಲ್ಲಿ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡಿದರು.
Published on

ಶಿವಮೊಗ್ಗ: ಸಾಗರ ತಾಲೂಕಿನ ಗಿಣಿವಾರ ಗ್ರಾಮದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ 6ರಿಂದ 10ನೇ ತರಗತಿಯ 150ಕ್ಕೂ ಅಧಿಕ ಮಕ್ಕಳು ಭಾನುವಾರ ಗದ್ದೆಯಲ್ಲಿ ಭತ್ತ ನಾಟಿ ಮಾಡಿ ಸಂಭ್ರಮಿಸಿದರು.

ಶಿಕ್ಷಣ ಎಂಬುದು ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ ವಿದ್ಯಾರ್ಥಿಗಳಿಗೆ ಹೊರಗಿನ ಪ್ರಪಂಚದ ಅರಿವೂ ಮೂಡಬೇಕೆನ್ನುವ ಉದ್ದೇಶದೊಂದಿಗೆ ಕೊಡಚಾದ್ರಿ ಸಂಸ್ಥೆಯಲ್ಲಿ ಸತತವಾಗಿ ಆರು ವರ್ಷಗಳಿಂದ ನಾಟಿ ಕಾರ್ಯ ಮಾಡಿಸಲಾಗುತ್ತಿದೆ. ಕೈ ಕೆಸರಾದರೆ ಬಾಯಿ ಮೊಸರೆಂಬ ನಾಣ್ನುಡಿಯಂತೆ ಮಕ್ಕಳು ಖುಷಿಯಿಂದಲೇ ಗದ್ದೆಗೆ ಇಳಿದು ನಾಟಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net