

ಬೆಂಗಳೂರು: ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಅದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದ ಅಂಗವಾಗಿ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಾಗುತ್ತದೆ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಹಾಗೂ ಔಷಧೀಯ ಗುಣವುಳ್ಳ 75 ಸಸಿಗಳನ್ನು ಅಮೃತ ಸರೋವರ ಸ್ಥಳದಲ್ಲಿ ನೆಟ್ಟು ಅಮೃತ ವಾಟಿಕವನ್ನು ಅಭಿವೃದ್ಧಿಪಡಿಸುವುದರೊಂದಿಗೆ ವಸುಧಾ ವಂದನ್ ಕಾರ್ಯಕ್ರಮದ ಮೂಲಕ ಮಾತೃಭೂಮಿಗೆ ವಂದನೆ ಸಲ್ಲಿಸಲಾಗುತ್ತದೆ. ಆಗಸ್ಟ್ 15ರ ವರೆಗೆ ಈ ಕಾರ್ಯಕ್ರಮ ಜಾರಿಯಲ್ಲಿರುತ್ತದೆ.
ಇದೇ ಸಂದರ್ಭದಲ್ಲಿ ನೆಡುವ ಸಸಿಗಳ ಆರೈಕೆ ಮತ್ತು ಸುಸ್ಥಿರತೆಗಾಗಿ ಸಸಿಗಳನ್ನು ದತ್ತು ಪಡೆದವರ ಹೆಸರನ್ನು ಸಸಿಗಳಿಗೆ ನಾಮಕರಣ ಮಾಡುವ ಯೋಜನೆಯೊಂದನ್ನು ಸರ್ಕಾರ ಜಾರಿಗೊಳಿಸಿದೆ. ನೀವೂ ಸಸಿ ನೆಡಿ, ಹೆಮ್ಮೆ ಪಡಿ.