

ನಂಜನಗೂಡು: ನಗರದ ಶಿಕ್ಷಕರ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಅಲ್ಲಿನ ನಿವಾಸಿಗಳು 100ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಗರಸಭಾ ಸದಸ್ಯ ಮಹದೇವಸ್ವಾಮಿ ಮಾತನಾಡಿ, ಪ್ರತಿ ಬಡಾವಣೆಯಲ್ಲೂ ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಉತ್ತಮ ವಾತಾವರಣ ನಿರ್ಮಾಣ ಆಗುವುದರ ಜತೆಗೆ ಪ್ರಾಕೃತಿಕ ಅಸಮತೋಲವನ್ನು ತಡೆಗಟ್ಟಲು ನೆರವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು ಅವರನ್ನು ನಿವಾಸಿಗಳು ಗೌರವಿಸಿದರು. ನಿವಾಸಿಗಳಾದ ಕೆ.ಎನ್.ವೆಂಕಟೇಶ್, ಸತೀಶ್ ಎಸ್.ದಳವಾಯಿ, ರಾಮಚಂದ್ರಶೆಟ್ಟಿ, ಕಾಶಿರಾವ್, ನಾಗಣ್ಣಾಚಾರ್, ವರದರಾಜು, ಹುಲ್ಲಹಳ್ಳಿ ಮಹದೇವಪ್ಪ, ಗಿರೀಶ್, ಮಂಜುನಾಥ್, ರವಿ, ಶಿವಕುಮಾರ್, ಮಹೇಶ್, ದೇವರಾಜು, ಮುರುಳಿ, ಬಾಲಾಜಿ, ಅನೂಪ್, ನವೀನ್ ಸೇರಿದಂತೆ ಇತರರಿದ್ದರು.