

ಇಸ್ತಾಂಬುಲ್: ಟರ್ಕಿಯ ಇಸ್ತಾಂಬುಲ್ನ ಸಬಿಹಾ ಗೊಕ್ಸೆನ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ರಯಾಣಿಕರಿದ್ದ ವಿಮಾನ ಒದ್ದೆಯಾದ ರನ್ವೇದಲ್ಲಿ ಅಪಘಾತಕ್ಕೀಡಾಗಿ ಮೂವರು ಮೃತಪಟ್ಟಿದ್ದು 179 ಮಂದಿ ಗಾಯಗೊಂಡಿದ್ದಾರೆ.
ರನ್ ವೇದಲ್ಲಿ ವಿಮಾನ ಸ್ಕಿಡ್ ಆಗಿ ಲ್ಯಾಂಡ್ ಆಗಿ ಮೂರು ತುಂಡುಗಳಾಗಿ ಬಿದ್ದ ಭಯಹುಟ್ಟಿಸುವ ವಿಡಿಯೋ ಕೂಡ ವೈರಲ್ ಆಗಿದೆ.
ಈ ವಿಮಾನದಲ್ಲಿ ಒಟ್ಟು 183 ಜನರಿದ್ದರು. ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮೃತಪಟ್ಟಿದ್ದಾರೆ ಎಂದು ಟರ್ಕಿ ಸರ್ಕಾರ ತಿಳಿಸಿದೆ.
ಮಾನ ರನ್ ವೇದಲ್ಲಿ ಲ್ಯಾಂಡ್ ಆಗುವಾಗ ಸ್ಕಿಡ್ ಆಗಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಮಾನ ರನ್ ವೇದಲ್ಲಿ ವೇಗವಾಗಿ ಬಂದು ನಂತರ ಮೂರು ಭಾಗಗಳಾಗಿ ಚದುರಿ ಬಿದ್ದಿದೆ ಎನ್ನಲಾಗಿದೆ.
ವಿಮಾನ ಅಪಘಾತಕ್ಕೆ ಕೆಟ್ಟ ವಾತಾವರಣವೇ ಕಾರಣ ಎನ್ನಲಾಗಿದೆ. ಮೋಡಮುಸುಕಿದ ವಾತಾವರಣವಿದ್ದುದರಿಂದ ವಿಮಾನ ಸರಿಯಾಗಿ ರನ್ ವೇ ಮೇಲೆ ಇಳಿಯಲಿಲ್ಲ ಎಂದು ತಿಳಿಸಿದೆ.
ವಿಮಾನ ಅಪಘಾತದಲ್ಲಿ ಗಾಯಗೊಂಡವರನ್ನು ಸುತ್ತಮುತ್ತಲ ಒಟ್ಟು 18 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.(ಏಜೆನ್ಸೀಸ್)