ಹುಬ್ಬಳ್ಳಿ - ಮುಂಬೈ ವಿಮಾನ ಸಂಚಾರ ಪುನರಾರಂಭ

min
Published on

ನವದೆಹಲಿ: ಹುಬ್ಬಳ್ಳಿ ಮತ್ತು ಮುಂಬೈ ನಡುವಿನ ತನ್ನ ವಿಮಾನ ಸೇವೆಯನ್ನು ಫೆಬ್ರವರಿ 16 ರಿಂದ ಪುನರಾರಂಭಿಸಲು ಏರ್ ಇಂಡಿಯಾ ನಿರ್ಧರಿಸಿದೆ. ವಾರದಲ್ಲಿ ಮೂರು ದಿನ ಏರ್​ಬಸ್​ಗಳು ಸಂಚರಿಸಲಿವೆ - ಮಂಗಳವಾರ, ಶುಕ್ರವಾರ ಮತ್ತು ಶನಿವಾರ. ಕೋವಿಡ್ ಪ್ರಯುಕ್ತ ಸುಮಾರು 10 ತಿಂಗಳಿಂದ ಈ ಸೇವೆ ಸ್ಥಗಿತಗೊಂಡಿತ್ತು.

ಕೇಂದ್ರದ ಸಂಸದೀಯ​ ವ್ಯವಹಾರ ಮತ್ತು ಕೋಲ್ಸ್​ ಅಂಡ್ ಮೈನ್ಸ್ ಸಚಿವರಾದ ಪ್ರಹ್ಲಾದ್ ಜೋಶಿ ಈ ಮಾಹಿತಿಯನ್ನು ಟ್ವಿಟರ್ ಮೂಲಕ ಶೇರ್ ಮಾಡಿದ್ದಾರೆ.

ಹುಬ್ಬಳ್ಳಿ ಮತ್ತು ಮುಂಬೈ ನಗರಗಳ ನಡುವಿನ ವಿಮಾನ ಸೇವೆಯನ್ನು 2020 ರ ಜನವರಿ 20 ರಂದು ಆರಂಭಿಸಲಾಗಿತ್ತು. ಆದರೆ ಎರಡೇ ತಿಂಗಳ ನಂತರ ಮುಂಬೈನಲ್ಲಿ ಕರೊನಾ ಹೆಚ್ಚಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಈ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net