ಮನೆಗಳ ಬಳಿಯೇ ವಿಮಾನ ಪತನ; ಕೆಲವೇ ಸೆಕೆಂಡ್‌ಗಳ ಮುನ್ನ ಜಿಗಿದು ಪಾರಾದ ಇಬ್ಬರು ಪೈಲಟ್‌ಗಳು! | British Plane Crash

ವೇಲ್ಸ್‌ನ ಆಂಗ್ಲೆಸಿಯಲ್ಲಿ ಆರ್‌ಎಎಫ್ ಹಾಕ್ ಟಿ2 ತರಬೇತಿ ವಿಮಾನ ಪತನಗೊಂಡಿದೆ. ಅಪಘಾತಕ್ಕೂ ಮುನ್ನ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ಜಿಗಿದು ಪಾರಾಗಿದ್ದಾರೆ.
 Plane crashes near houses
ಬೀಳುತ್ತಿದ್ದ ವಿಮಾನದಿಂದ ಪ್ಯಾರಾಚೂಟ್‌ನಲ್ಲಿ ಜಿಗಿದು ಪಾರಾದ ಪೈಲಟ್‌ಗಳು
Published on
Summary

ಆಂಗ್ಲೆಸಿಯಲ್ಲಿ ಆರ್‌ಎಎಫ್ ಹಾಕ್ ಟಿ2 ವಿಮಾನ ಪತನ

ಪ್ಯಾರಾಚೂಟ್ ಮೂಲಕ ಹೊರಗೆ ಜಿಗಿದ ಪೈಲಟ್‌ಗಳು

ಮನೆಗಳ ಸಮೀಪವೇ ನಡೆದ ವಿಮಾನ ದುರಂತ

RAF Valley Plane Crash: ಬ್ರಿಟನ್‌ನ ವೇಲ್ಸ್‌ನ ಆಂಗ್ಲೆಸಿಯಲ್ಲಿ ಆರ್‌ಎಎಫ್ ಹಾಕ್ ಟಿ2 ತರಬೇತಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಅಪಘಾತಕ್ಕೂ ಕೆಲವೇ ಕ್ಷಣಗಳ ಮುನ್ನ ಪ್ಯಾರಾಚೂಟ್ ಮೂಲಕ ಜಿಗಿದು ಸುರಕ್ಷಿತವಾಗಿ ಪಾರಾಗಿದ್ದಾರೆ.

ಘಟನೆಯ ವಿಡಿಯೋದಲ್ಲಿ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್‌ನಲ್ಲಿ ಕೆಳಗೆ ಇಳಿಯುತ್ತಿರುವುದು ಕಾಣಿಸಿದೆ. ಬಳಿಕ ವಿಮಾನ ನೆಲಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಇಬ್ಬರು ಪೈಲಟ್‌ಗಳನ್ನು ಬಳಿಕ ಪತ್ತೆ ಮಾಡಲಾಗಿದೆ.

ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯ

ಆಂಗ್ಲೆಸಿಯ ಪೆನ್‌ಕಾರ್ನಿಸಿಯೋಗ್‌ನಲ್ಲಿ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್‌ಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕೋಸ್ಟ್‌ಗಾರ್ಡ್ ಹಾಗೂ ಏರ್ ಆಂಬುಲೆನ್ಸ್ ಹೆಲಿಕಾಪ್ಟರ್‌ಗಳು ಧಾವಿಸಿದ್ದು, ಬಳಿಕ ಪೈಲಟ್‌ಗಳನ್ನು ಬರ್ಮಿಂಗ್‌ಹ್ಯಾಮ್‌ನ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನ ಅಪಘಾತದ ಬಗ್ಗೆ ತನಿಖೆ

ವಿಮಾನ ಅಪಘಾತದ ಬಗ್ಗೆ ರಾಯಲ್ ಏರ್ ಫೋರ್ಸ್ ತನಿಖೆ ಆರಂಭಿಸಿದೆ. ಆರ್‌ಎಎಫ್ ವ್ಯಾಲಿಯಿಂದ ಹಾರಾಟ ನಡೆಸಿದ್ದ ಹಾಕ್ ಟಿ2 ವಿಮಾನವೇ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ಮುಂದುವರಿದಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ವಕ್ತಾರರು ಹೇಳಿದ್ದಾರೆ

ಕಾರವಾನ್ ಪಾರ್ಕ್ ಸಮೀಪವೇ ಪತನ

ವಿಮಾನವು ಗ್ರಾಮ ಹಾಗೂ ಕಾರವಾನ್ ಪಾರ್ಕ್‌ಗೆ ಅತ್ಯಂತ ಸಮೀಪದಲ್ಲಿ ಪತನಗೊಂಡಿದೆ. ಹೀಗಾಗಿ ದೊಡ್ಡ ಅಪಾಯವೊಂದು ತಪ್ಪಿದೆ ಎಂದು ಆಂಗ್ಲೆಸಿ ಕೌನ್ಸಿಲರ್ ನೆವಿಲ್ ಇವಾನ್ಸ್ ಹೇಳಿದ್ದಾರೆ. ಪ್ರತ್ಯಕ್ಷದರ್ಶಿ ಪೀಟ್ ಬೆನೆಟ್, ವಿಮಾನ ಟೇಕ್‌ಆಫ್ ಆಗುವುದನ್ನು ನೋಡಿದ್ದೆ. ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ಸಮಸ್ಯೆ ಉಂಟಾಗಿರುವುದು ಗೊತ್ತಾಯಿತು ಎಂದು ತಿಳಿಸಿದ್ದಾರೆ.

ಪೈಲಟ್‌ಗಳಿಗೆ ತರಬೇತಿ ನೀಡುವ ಕೇಂದ್ರ

ಆರ್‌ಎಎಫ್ ವ್ಯಾಲಿ ಬ್ರಿಟನ್‌ನ ಪ್ರಮುಖ ಪೈಲಟ್ ತರಬೇತಿ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಮುಂದಿನ ಪೀಳಿಗೆಯ ಫೈಟರ್ ಪೈಲಟ್‌ಗಳಿಗೆ ತರಬೇತಿ ನೀಡಲಾಗುತ್ತದೆ. ಸಮುದ್ರ ಕಾರ್ಯಾಚರಣೆ ಹಾಗೂ ಶೋಧ ಮತ್ತು ರಕ್ಷಣಾ ಕಾರ್ಯಗಳಿಗೂ ಈ ನೆಲೆಯನ್ನು ಬಳಸಲಾಗುತ್ತದೆ.

ಇದನ್ನೂ ಓದಿ: ಗಣಪನ ‘ಮಾಡರ್ನ್’ ಅವತಾರ; ಟಿವಿ ನೋಡ್ತಾನೆ, ಜಿಮ್ ಮಾಡ್ತಾನೆ, ಫ್ಯಾಮಿಲಿ ಜತೆ ಟೀ ಕುಡೀತಾನೆ! | Indore Ganesh

1941ರಲ್ಲಿ ಆರಂಭವಾದ ಆರ್‌ಎಎಫ್ ವ್ಯಾಲಿ, ಎರಡನೇ ಮಹಾಯುದ್ಧದ ಸಮಯದಲ್ಲೂ ಪ್ರಮುಖ ಪಾತ್ರ ವಹಿಸಿತ್ತು. 2010ರಿಂದ 2013ರವರೆಗೆ ಪ್ರಿನ್ಸ್ ಆಫ್ ವೇಲ್ಸ್ ವಿಲಿಯಂ ಕೂಡ ಇಲ್ಲಿ ಶೋಧ ಮತ್ತು ರಕ್ಷಣಾ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net