ಗಣಪನ ‘ಮಾಡರ್ನ್’ ಅವತಾರ; ಟಿವಿ ನೋಡ್ತಾನೆ, ಜಿಮ್ ಮಾಡ್ತಾನೆ, ಫ್ಯಾಮಿಲಿ ಜತೆ ಟೀ ಕುಡೀತಾನೆ! | Indore Ganesh

ಇಂದೋರ್‌ನಲ್ಲಿ ವಿಭಿನ್ನ ಗಣೇಶ ಅಲಂಕಾರವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಟಿವಿ ನೋಡುತ್ತಿರುವ ವಿನಾಯಕ, ಕುಟುಂಬದ ಜೊತೆ ಊಟ, ಜಿಮ್‌ನಲ್ಲಿ ವರ್ಕೌಟ್ ಮಾಡುವ ದೃಶ್ಯಗಳ ಜೊತೆಗೆ ಇಂದೋರ್ ನಗರದ ಅಭಿವೃದ್ಧಿಯ ಪಯಣವನ್ನೂ ಇಲ್ಲಿ ಪ್ರದರ್ಶಿಸಲಾಗಿದೆ.
Bappa’s ‘modern’ lifestyle
ಇಂದೋರ್‌ನಲ್ಲಿ ‘ಮಾಡರ್ನ್’ ಲೈಫ್‌ಸ್ಟೈಲ್‌ನ ಗಣಪ; ಅಲಂಕಾರಕ್ಕೆ ಭರ್ಜರಿ ಮೆಚ್ಚುಗೆ
Published on

Indore Unique Ganesh Jhanki: ಇಂದೋರ್‌ನಲ್ಲಿ ಗಣೇಶ ಹಬ್ಬಕ್ಕೆ ಈ ಬಾರಿ ವಿಭಿನ್ನ ಅಲಂಕಾರ ಮಾಡಲಾಗಿದೆ. ಇಲ್ಲಿ ಗಣಪತಿ ಬಪ್ಪನ ಕಲ್ಪಿತ ದಿನಚರಿಯನ್ನೇ ದೃಶ್ಯ ರೂಪದಲ್ಲಿ ತೋರಿಸಲಾಗಿದೆ. ಟಿವಿ ನೋಡುವುದು, ಕುಟುಂಬದ ಜತೆ ಊಟ ಮಾಡುವುದು, ಜಿಮ್‌ನಲ್ಲಿ ವರ್ಕೌಟ್ ಮಾಡುವುದು ಸೇರಿದಂತೆ ಹಲವು ದೃಶ್ಯಗಳು ಗಮನ ಸೆಳೆಯುತ್ತಿವೆ.

ಗಣೇಶನನ್ನು ಹಾಸಿಗೆಯ ಮೇಲೆ ಕುಳಿತು ಟಿವಿ ನೋಡುತ್ತಿರುವಂತೆ, ಕುಟುಂಬದ ಜತೆ ಅಡುಗೆಮನೆಯಲ್ಲಿ ಊಟ ಮಾಡುತ್ತಿರುವಂತೆ ತೋರಿಸಲಾಗಿದೆ. ಜಿಮ್‌ನಲ್ಲಿ ಟ್ರೆಡ್‌ಮಿಲ್ ಮೇಲೆ ವರ್ಕೌಟ್ ಮಾಡುತ್ತಿರುವ ಬಪ್ಪನ ದೃಶ್ಯವೂ ಇದೆ. ಡ್ರಾಯಿಂಗ್ ರೂಮ್‌ನಲ್ಲಿ ಶಿವ, ಪಾರ್ವತಿ ಮತ್ತು ಕಾರ್ತಿಕೇಯರ ಜೊತೆ ಟೀ ಕುಡಿಯುತ್ತಿರುವ ದೃಶ್ಯವೂ ವಿಶೇಷವಾಗಿದೆ.

ಈ ಮೂಲಕ ವ್ಯಾಯಾಮ, ಕುಟುಂಬದ ಜತೆ ಸಮಯ ಕಳೆಯುವುದು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರಲಾಗಿದೆ.

ಎತ್ತಿನ ಗಾಡಿಯಿಂದ ಮೆಟ್ರೋವರೆಗೆ

ಬಪ್ಪನ ದಿನಚರಿ ಮಾತ್ರವಲ್ಲ, ಇಂದೋರ್‌ನ ಅಭಿವೃದ್ಧಿಯ ಪಯಣವನ್ನೂ ಇಲ್ಲಿ ತೋರಿಸಲಾಗಿದೆ. ಎತ್ತಿನ ಗಾಡಿಯಂತಹ ಹಳೆಯ ಸಾರಿಗೆ ವ್ಯವಸ್ಥೆಯಿಂದ ಇಂದಿನ ಮೆಟ್ರೋವರೆಗಿನ ಬದಲಾವಣೆಯನ್ನು ವಿವಿಧ ಮಾದರಿಗಳ ಮೂಲಕ ಚಿತ್ರಿಸಲಾಗಿದೆ. ರಾಜವಾಡ ಅರಮನೆ, ಮೆಟ್ರೋ, ಸ್ವಚ್ಛತಾ ಕಾರ್ಮಿಕರು, ಐಡಿಎ ಕಟ್ಟಡ, ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಮಹೇಶ್ವರದ ಪ್ರಮುಖ ಅಂಶಗಳನ್ನೂ ಅಲಂಕಾರದಲ್ಲಿ ಸೇರಿಸಲಾಗಿದೆ.

ಎರಡೂವರೆ ತಿಂಗಳ ಪರಿಶ್ರಮ

ಈ ಬೃಹತ್ ಅಲಂಕಾರ ಸಿದ್ಧಪಡಿಸಲು ಸುಮಾರು ಎರಡೂವರೆ ತಿಂಗಳು ಬೇಕಾಗಿದೆ. ಪೇಪರ್, ಪ್ಲಾಸ್ಟರ್ ಆಫ್ ಪ್ಯಾರಿಸ್, ಲೈಟಿಂಗ್, ಪೇಂಟಿಂಗ್, ಪ್ಲಂಬಿಂಗ್ ಸೇರಿದಂತೆ ಹಲವು ಕೆಲಸಗಳನ್ನು ಮಾಡಲಾಗಿದೆ. ಸುಮಾರು 7ರಿಂದ 8 ಏಜೆನ್ಸಿಗಳು ಕೆಲಸದಲ್ಲಿ ಕೈಜೋಡಿಸಿದ್ದು, ಕೇಶವ್, ಮೋಹಿತ್ ಮತ್ತು ವಿಶಾಲ್ ಪ್ರಮುಖವಾಗಿ ವಿನ್ಯಾಸ ಹಾಗೂ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು.

ಇದನ್ನೂ ಓದಿ:ನಿದ್ದೆಯಲ್ಲೇ ಮಗು ನಗುತ್ತೆ, ಕೈಕಾಲು ಆಡಿಸುತ್ತೆ; ಯಾಕೆ ಗೊತ್ತಾ? ಇದರ ಹಿಂದಿದೆ ಅಚ್ಚರಿ ಕಾರಣ! | Newborn smiling in sleep

ಭಕ್ತಿ, ಕ್ರಿಯೇಟಿವಿಟಿ ಮತ್ತು ಸಾಮಾಜಿಕ ಸಂದೇಶವನ್ನು ಒಟ್ಟಿಗೆ ಕಟ್ಟಿಕೊಟ್ಟಿರುವ ಈ ವಿಶೇಷ ಗಣೇಶ ಅಲಂಕಾರ ಇಂದೋರ್‌ನ ಗಣೇಶೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net