ನಿದ್ದೆಯಲ್ಲೇ ಮಗು ನಗುತ್ತೆ, ಕೈಕಾಲು ಆಡಿಸುತ್ತೆ; ಯಾಕೆ ಗೊತ್ತಾ? ಇದರ ಹಿಂದಿದೆ ಅಚ್ಚರಿ ಕಾರಣ! | Newborn smiling in sleep

ನವಜಾತ ಮಗು ನಿದ್ರೆಯಲ್ಲಿ ನಗುವುದು, ತುಟಿ ಅಲುಗಾಡಿಸುವುದು ಅಥವಾ ಕೈಕಾಲು ಆಡಿಸುವುದನ್ನು ಪೋಷಕರು ಗಮನಿಸಿರುತ್ತಾರೆ. ಆದರೆ ಮಗು ನಿದ್ದೆಯಲ್ಲೇ ಯಾಕೆ ನಗುತ್ತೆ? ಇದರ ಹಿಂದಿರುವ ಕಾರಣ ಏನು? ಇಲ್ಲಿದೆ ಮಾಹಿತಿ.
ನಿದ್ದೆಯಲ್ಲೇ ಮಗು ನಗೋದಕ್ಕೆ ಇದೇ ಕಾರಣ
ನಿದ್ದೆಯಲ್ಲೇ ಮಗು ನಗೋದಕ್ಕೆ ಇದೇ ಕಾರಣThe baby smiles in its sleep
Published on

Newborn Baby: ಹುಟ್ಟಿದ ಮಗು ನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ನಗುವುದು, ತುಟಿ ಅಲುಗಾಡಿಸುವುದು, ಮುಖ ಸಿಂಡರಿಸುವುದು ಅಥವಾ ಕೈಕಾಲು ಆಡಿಸುವುದನ್ನು ಪೋಷಕರು ಗಮನಿಸಿರುತ್ತಾರೆ. ಈ ದೃಶ್ಯ ಖುಷಿ ನೀಡೋದು ಸಹಜ. ಆದರೆ ಮಗು ನಿದ್ದೆಯಲ್ಲೇ ಯಾಕೆ ನಗುತ್ತೆ? ಕೈಕಾಲು ಯಾಕೆ ಆಡಿಸುತ್ತೆ? ಇದರ ಹಿಂದೆ ಇರುವ ಕಾರಣ ಏನು?

ನವಜಾತ ಶಿಶುಗಳು ನಿದ್ರೆಯಲ್ಲಿ ನಗುವುದು ಅಥವಾ ಕೈಕಾಲುಗಳನ್ನು ಆಡಿಸುತ್ತಾ ಸನ್ನೆ ಮಾಡುವುದು ಸಂಪೂರ್ಣವಾಗಿ ಸಾಮಾನ್ಯ ಪ್ರಕ್ರಿಯೆಯಾಗಿದೆ. ಮನೆಯಲ್ಲಿ ಹಿರಿಯರು ಮಗು ಹಳೇ ನೆನಪುಗಳನ್ನು ನೆನೆಯುತ್ತಿದೆ ಅಥವಾ ದೇವರೆದುರು ಆಟವಾಡುತ್ತಿದೆ ಎಂದು ಹೇಳುತ್ತಾರಾದರೂ, ವೈಜ್ಞಾನಿಕವಾಗಿ ಇದಕ್ಕೆ ಬೇರೆದೇ ಆದ ಮುಖ್ಯ ಕಾರಣಗಳಿವೆ.

ನಿದ್ರೆಯಲ್ಲಿ ಕಾಣಿಸುವ ನಗು ‘ರಿಫ್ಲೆಕ್ಸ್ ಸ್ಮೈಲ್’

ಮಗು ಹುಟ್ಟಿದ ಆರಂಭದ ದಿನಗಳಲ್ಲಿ ಕಾಣಿಸುವ ನಗು ಸಾಮಾನ್ಯವಾಗಿ ‘ರಿಫ್ಲೆಕ್ಸ್ ಸ್ಮೈಲ್’(Reflex Smile)ಆಗಿರುತ್ತದೆ. ಇದು ಮಗು ಸಂತೋಷದಿಂದ ಉದ್ದೇಶಪೂರ್ವಕವಾಗಿ ನಗೋದಲ್ಲ. ಮೆದುಳು ಮತ್ತು ನರಮಂಡಲದಿಂದ ಮುಖದ ಸ್ನಾಯುಗಳಿಗೆ ಹೋಗುವ ಅಪ್ರಯತ್ನಿತ ಸಂಕೇತಗಳಿಂದ ಈ ನಗು ಕಾಣಿಸಿಕೊಳ್ಳಬಹುದು.

A baby smiling in its sleep
ಮಗು ನಿದ್ದೆಯಲ್ಲಿ ನಗೋದು ಕನಸಿನಿಂದಲ್ಲ!

ಆರ್‌ಇಎಂ ಸ್ಲೀಪ್‌ನಲ್ಲಿ ಮೆದುಳು ಸಕ್ರಿಯ

ನವಜಾತ ಶಿಶುಗಳು ಹೆಚ್ಚು ಸಮಯಆ್ಯಕ್ಟಿವ್ ಸ್ಲೀಪ್’ ಅಥವಾ ಆರ್‌ಇಎಂ (Rapid Eye Movement) ಅಂತದಲ್ಲಿ ಮೆದುಳು ಸಕ್ರಿಯವಾಗಿರುವುದರಿಂದ ಕಣ್ಣು, ತುಟಿ, ಮುಖ ಹಾಗೂ ಕೈಕಾಲುಗಳಲ್ಲಿ ಸಣ್ಣಪುಟ್ಟ ಚಲನೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇವು ನಗುವಿನಂತೆ ಕಾಣಿಸುತ್ತವೆ.

ನರಮಂಡಲ ಇನ್ನೂ ಬೆಳೆಯುತ್ತಿರುತ್ತೆ

ಹುಟ್ಟಿದ ಬಳಿಕ ಮಗುವಿನ ಮೆದುಳು ಮತ್ತು ನರಮಂಡಲ ವೇಗವಾಗಿ ಬೆಳೆಯುತ್ತಿರುತ್ತವೆ. ಹೀಗಾಗಿ ನಿದ್ರೆಯಲ್ಲೂ ಮುಖ, ಬೆರಳು, ಕೈಕಾಲುಗಳಲ್ಲಿ ಸಣ್ಣ ಚಲನೆಗಳು ಆಗೋದು ಸಹಜ. ಸಾಮಾನ್ಯವಾಗಿ ಇದಕ್ಕೆ ಆತಂಕಪಡುವ ಅಗತ್ಯವಿಲ್ಲ.

ಮುಖದ ಚಲನೆಗಳೂ ಬೆಳವಣಿಗೆಯ ಭಾಗ

ನಿದ್ರೆಯಲ್ಲಿ ಕಾಣಿಸುವ ಈ ಸಣ್ಣಪುಟ್ಟ ಮುಖದ ಚಲನೆಗಳು ಮುಂದೆ ಮಗು ಎಚ್ಚರವಾಗಿದ್ದಾಗ ನಗುವುದು ಹಾಗೂ ವಿವಿಧ ಮುಖಭಾವ ತೋರಿಸುವುದನ್ನು ಕಲಿಯುವ ಪ್ರಕ್ರಿಯೆಯ ಭಾಗವಾಗಿರಬಹುದು. ಕೆಲವೊಮ್ಮೆ ಹಾಲು ಕುಡಿದ ನಂತರದ ಜೀರ್ಣಕ್ರಿಯೆ ಅಥವಾ ಗ್ಯಾಸ್‌ನಿಂದಲೂ ಮುಖದಲ್ಲಿ ನಗುವಿನಂಥ ಭಾವನೆ ಕಾಣಿಸಬಹುದು.

‘Active Sleep’
ನವಜಾತ ಶಿಶುಗಳು ಹೆಚ್ಚು ಸಮಯ ‘ಆ್ಯಕ್ಟಿವ್ ಸ್ಲೀಪ್’ ಹಂತದಲ್ಲಿರುತ್ತವೆ

‘ಸೋಶಿಯಲ್ ಸ್ಮೈಲ್’ ಯಾವಾಗ ಶುರು?

ಸಾಮಾನ್ಯವಾಗಿ 2ರಿಂದ 3 ತಿಂಗಳ ವೇಳೆಗೆ ಮಗು ಪೋಷಕರ ಮುಖ ನೋಡಿದಾಗ ಅಥವಾ ಧ್ವನಿ ಕೇಳಿದಾಗ ಪ್ರತಿಕ್ರಿಯೆಯಾಗಿ ನಗಲು ಶುರು ಮಾಡುತ್ತದೆ. ಇದನ್ನೇ ‘Social Smile’ ಅಂತ ಕರೆಯುತ್ತಾರೆ. ಇದು ಮಗುವಿನ ಸಾಮಾಜಿಕ ಬೆಳವಣಿಗೆಯ ಪ್ರಮುಖ ಹಂತ.

ನಿದ್ದೆಯಲ್ಲಿ ಮಗು ನಕ್ಕರೆ ಏನರ್ಥ?

ಸಾಮಾನ್ಯವಾಗಿ ನಿದ್ದೆಯಲ್ಲಿ ಮಗು ನಗುವುದು, ತುಟಿ ಅಲುಗಾಡಿಸುವುದು, ಮುಖ ಸಿಂಡರಿಸುವುದು ಅಥವಾ ಕೈಕಾಲು ಆಡಿಸುವುದು ಸಹಜ. ಇದು ಬಹುತೇಕ ಸಂದರ್ಭಗಳಲ್ಲಿ ಮಗುವಿನ ಮೆದುಳು ಮತ್ತು ನರಮಂಡಲ ಬೆಳೆಯುತ್ತಿರುವುದರ ಭಾಗ.

ಇದನ್ನೂ ಓದಿ: ಮೊಟ್ಟೆ ತಿಂದರೆ ಚರ್ಮದ ಸೋಂಕು ಹೆಚ್ಚಾಗುತ್ತಾ? ಡಾಕ್ಟರ್ ಹೇಳುವುದೇನು? ಇಲ್ಲಿದೆ ಉಪಯುಕ್ತ ಮಾಹಿತಿ...Eggs

ಆದರೆ ಚಲನೆಗಳು ಪದೇಪದೇ ಅಥವಾ ತೀವ್ರವಾಗಿ ಕಾಣಿಸಿಕೊಂಡರೆ, ಉಸಿರಾಟದಲ್ಲಿ ತೊಂದರೆ ಅಥವಾ ಬೇರೆ ಅಸಹಜ ಲಕ್ಷಣಗಳು ಕಂಡುಬಂದರೆ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net