ವಿಮಾನ ಪತನ:18 ಶವಗಳು ನದಿಯಲ್ಲಿ ಪತ್ತೆ..Plane Crash

Plane Crash
Published on

ಮಿಲಿಟರಿ ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿ

ಮೆರಿಕಾ: ( Plane Crash )  ಅಮೆರಿಕನ್ ಏರ್​ಲೈನ್ಸ್​  ವಿಮಾನವು  ಮಿಲಿಟರಿ ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ನಂತರ ಎರಡೂ ವಿಮಾನಗಳು  ಅಪಘಾತಕ್ಕೀಡಾಗಿ ಸಾವು- ನೋವು ಸಂಭವಿಸಿದೆ. ಅಮೆರಿಕಾದ ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಬಿದ್ದಿದೆ.  ಈ ನದಿಯಲ್ಲಿ 18  ಶವಗಳು ಪತ್ತೆಯಾಗಿವೆ ಎನ್ನುವ ಮಾಹಿತಿ ಕೂಡಾ ದೊರೆತಿದೆ.

ಮಾಹಿತಿ ಪ್ರಕಾರ, ವಿಮಾನದಲ್ಲಿ 60 ಮಂದಿ ಇದ್ದರು. ವಿಮಾನವು ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ವಿಮಾನವು ಅಮೆರಿಕದ ಕಾನ್ಸಾಸ್ ನಗರದಿಂದ ವಾಷಿಂಗ್ಟನ್‌ಗೆ ಬರುತ್ತಿತ್ತು. ಹೆಲಿಕಾಪ್ಟರ್‌ಗೆ ವಿಮಾನ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಅದು ಕೆನಡಿಯನ್ ಏರ್ ವಿಮಾನವಾಗಿತ್ತು. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಮತ್ತು ಲ್ಯಾಂಡಿಂಗ್‌ಗಳನ್ನು ನಿಲ್ಲಿಸಲಾಗಿದೆ. ವಿಮಾನಗಳ ಅವಶೇಷಗಳು ಪ್ರಸ್ತುತ ಪೊಟೊಮ್ಯಾಕ್ ನದಿಯಲ್ಲಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನವು ಡಿಕ್ಕಿ ಹೊಡೆದ ಹೆಲಿಕಾಪ್ಟರ್ ಯುಎಸ್ ಆರ್ಮಿ ಹೆಲಿಕಾಪ್ಟರ್ ಬ್ಲ್ಯಾಕ್‌ಹಾಕ್ (H-60). ಅಪಘಾತದ ನಂತರ, ತುರ್ತು ಪರಿಸ್ಥಿತಿಯಿಂದಾಗಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. 18 ಮೃತದೇಹಗಳನ್ನು ಪೊಟೊಮ್ಯಾಕ್ ನದಿಯಿಂದ ಹೊರ ತೆಗೆಯಲಾಗಿದೆ.

ಸೇನಾ ಹೆಲಿಕಾಪ್ಟರ್ ಮತ್ತು ವಿಮಾನದ ನಡುವೆ ಡಿಕ್ಕಿ ಸಂಭವಿಸಿದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಅಷ್ಟಕ್ಕೂ ಸೇನಾ ಹೆಲಿಕಾಪ್ಟರ್ ಹಠಾತ್ತಾಗಿ ಬಂದಿದ್ದು ಹೇಗೆ? ಸೇನಾ ಹೆಲಿಕಾಪ್ಟರ್‌ನಲ್ಲಿದ್ದವರು ಯಾರು? ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (FAA) ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಾಯುಪ್ರದೇಶದಲ್ಲಿ ನಡೆದ ಘಟನೆಯನ್ನು ತನಿಖೆ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net