

ನವದೆಹಲಿ: ಜಪಾನ್ ಏರ್‌ಲೈನ್ಸ್ ವಿಮಾನವು ಮಂಗಳವಾರ ಚಿಟೋಸ್‌ನಿಂದ (ಸಿಟಿಎಸ್) ಇಳಿದ ಸ್ವಲ್ಪ ಸಮಯದ ನಂತರ ರನ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಭಯಾನಕ ಘಟನೆ ನಡೆದಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಟೋಕಿಯೊದ ಹನೆಡಾ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದೆ. ಜಪಾನ್ ಏರ್‌ಲೈನ್ಸ್‌ನ JAL 516 ಪ್ರಯಾಣಿಕ ವಿಮಾನವು ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ದೇಶದ ಸಾರ್ವಜನಿಕ ಪ್ರಸಾರಕ NHK ಪ್ರಸಾರ ಮಾಡಿದ ವೀಡಿಯೊಗಳು ವಿಮಾನದ ಕಿಟಕಿಗಳಿಂದ ಜ್ವಾಲೆಗಳು ಬರುತ್ತಿರುವುದನ್ನು ತೋರಿಸಿದೆ.
ಜಪಾನ್ ಏರ್‌ಲೈನ್ಸ್‌ನ ವಕ್ತಾರರು, ಅಂದಾಜು 300ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತಿದ್ದ ಜಪಾನ್‌ನ ಪ್ರಯಾಣಿಕ ವಿಮಾನ, ಟೋಕಿಯೋದ ಹನೆಡಾ ಏರ್‌ಪೋರ್ಟ್‌ನಲ್ಲಿ ಇಳಿದ ಕೆಲವೇ ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ರನ್‌ವೇಯಲ್ಲಿ ಇಳಿಯುವ ವೇಳೆಗೆ ವಿಮಾನಕ್ಕೆ ಬೆಂಕಿ ತಗುಲಿದೆ. ತಕ್ಷಣ ವಿಮಾನ ನಿಲ್ದಾಣದ ತುರ್ತು ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ವಿಮಾನವನ್ನು ತಲುಪಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈ ಅಪಘಾತದಿಂದ ಸುಮಾರು 367 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ ಎಂದು ಎನ್‌ಎಚ್‌ಕೆ ತಿಳಿಸಿದೆ.
ಜಪಾನ್ ಏರ್‌ಲೈನ್ಸ್ ಫ್ಲೈಟ್ JL516, ಏರ್‌ಬಸ್ A350 ಟೋಕಿಯೊ-ಹನೇಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಬೆಂಕಿಯ ಕಾರಣ ಸುತ್ತಲಿನ ನಿಖರವಾದ ವಿವರಗಳು ಖಚಿತವಾಗಿಲ್ಲ.