

ಬೆಂಗಳೂರು: ಸಿರಿಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆಯಿದೆ. ಹಾಗಾಗಿ ಪ್ರೋತ್ಸಾಹಧನ ಯೋಜನೆ ಮುಂದುವರಿಯಲಿದೆ. ಜತೆಗೆ ಉತ್ಪಾದನೆ 30 ರಿಂದ 50 ಸಾವಿರ ಹೆಕ್ಟೇರ್‌ಗೆ ಏರಿಸಲು ಯೋಜನಾ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಕೃಷಿ ಸ್ಟಾರ್ಟಪ್ ಉದ್ಯಮಿಗಳ ಜತೆಗೆ ಸಮಾಲೋಚನಾ ಸಭೆ ಸೋಮವಾರ ನಡೆಸಿದ ಅವರು, ರಾಜ್ಯದಲ್ಲಿ ಸ್ಥಾಪಿಸಲಾಗಿರುವ ುಡ್ ಪಾರ್ಕ್‌ಗಳ ಪುನಶ್ಚೇತನ, ಸಿರಿಧಾನ್ಯಗಳಿಗೆ ಸಂಬಂಧಿತ ಕಾರ್ಯಾಚರಣೆಯಲ್ಲಿರುವ ಸ್ಟಾರ್ಟಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರ ಜತೆ ಸಂಪರ್ಕಿಸುವ ಕುರಿತು ಚರ್ಚಿಸಿದರು.
ಕೃಷಿ ನವೋದ್ಯಮಗಳ ಪ್ರೋತ್ಸಾಹಕ್ಕೆ ರಾಜ್ಯ ಸರ್ಕಾರ ಸದಾ ಸಿದ್ಧವಿದೆ. ರೈತರಿಂದ ಉದ್ದಿಮೆದಾರರ ನೇರ ಖರೀದಿ ವ್ಯವಸ್ಥೆ, ಎ್ಪಿಒಗಳ ಜತೆ ಉದ್ದಿಮೆಗಳ ಸಂಪರ್ಕ ಕಲ್ಪಿಸುವ ಚಿಂತನೆಯಿದೆ ಎಂದರು.
ಪ್ರಸಕ್ತ ಸಿರಿಧಾನ್ಯ ಪುಡಿಗಳಿಗೆ ಜಿಎಸ್‌ಟಿಯನ್ನು ಶೇ.18 ರಿಂದ 5ಕ್ಕೆ ಇಳಿಕೆ ಮಾಡಲಾಗಿದೆ. ಇದನ್ನು ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೆ ವಿಸ್ತರಿಸಬೇಕೆಂಬ ನವೋದ್ಯಮಿಗಳ ಕೋರಿಕೆಯನ್ನು ಎನ್.ಚಲುವರಾಯಸ್ವಾಮಿ ಪುರಸ್ಕರಿಸಿ, ಕೇಂದ್ರ ಸರ್ಕಾರಕ್ಕೆ ಪೂರಕ ಪ್ರಸ್ತಾವನೆ ಕಳುಹಿಸುವ ಭರವಸೆ ನೀಡಿದರು.
ಸಿರಿಧಾನ್ಯ ಆಹಾರ ಉತ್ಪಾದಕರಿಗೆ ತಂತ್ರಜ್ಞಾನ ಸೌಲಭ್ಯ ವಿಸ್ತರಣೆ, ದೀರ್ಘಾವಧಿಗೆ ಆಹಾರ ಪದಾರ್ಥ ಸಂರಕ್ಷಣೆಗೆ ಸಿಎ್ಟಿಆರ್‌ಐ ನೆರವು ಒದಗಿಸಲು ಕ್ರಮಕೈಕೊಳ್ಳಲಾಗುವುದು. ಕೃಷಿ ನವೋದ್ಯಮಗಳು, ಉತ್ಪಾದಕರು, ಪೂರೈಕೆದಾರರ ಸಂಪರ್ಕ ಬೆಸೆಯುವ, ಮಾರುಕಟ್ಟೆ ಉತ್ತೇಜನಕ್ಕೆ ಸರ್ಕಾರದ ನೆರವು ಸಿಗಲಿದೆ. ಇದರಿಂದ ರೈತರಿಗೂ ಪ್ರಯೋಜನವಾಗಲಿದೆ ಎಂದು ಹೇಳಿದರು.
ಪ್ರತಿ ಜಿಲ್ಲೆಯಲ್ಲೂ ಎರಡು ದಿನಗಳ ಸಿರಿಧಾನ್ಯ ಮೇಳ ಏರ್ಪಾಡು. ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಸಹ ನೆರವು ಒದಗಿಸಲಾಗುವುದು ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಕೃಷಿ ಸ್ಟಾರ್ಟಪ್ ಉದ್ಯಮಿಗಳ ಜತೆಗೆ ಸಮಾಲೋಚನಾ ಸಭೆಯಲ್ಲಿ ರಾಜ್ಯ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್, ಹಿರಿಯ ಅಧಿಕಾರಿಗಳಾದ ರೋಹಿಣಿ ಸಿಂಧೂರಿ, ವೈ.ಎಸ್.ಪಾಟೀಲ್, ಬಂಥನಾಳ್, ನವೋದ್ಯಮಿಗಳು ಇದ್ದರು.