ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಯೋಜನೆ

sgr award
ಸಾಗರದಲ್ಲಿ ಆಯೋಜಿಸಿದ್ದ ಸಾಗರೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸಹೃದಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ನಾಗೇಶ್, ಕೆ.ಎಚ್. ಜ್ಞಾನೇಶ್ವರಪ್ಪ, ಎನ್. ಸಂತೋಷಕುಮಾರ್, ಜಿ.ಪರಮೇಶ್ವರಪ್ಪ, ಚೇತನರಾಜ್ ಕಣ್ಣೂರು, ವಿ.ಟಿ.ಸ್ವಾಮಿ ಇತರರಿದ್ದರು.
Published on

ಸಾಗರ: ತಾಲೂಕಿನಲ್ಲಿ ಅತಿ ಹೆಚ್ಚು ಸಾಂಸ್ಕೃತಿಕ, ಸಾಹಿತ್ಯ ಸೇರಿ ವೈವಿಧ್ಯಮಯ ಕಾರ್ಯಕ್ರಮ ನಡೆಯುತ್ತವೆ. ಈ ಊರು ವಿವಿಧ ಕಲೆಯಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ನಗರಸಭೆ ರಂಗಮಂದಿರದಲ್ಲಿ ಭಾನುವಾರ ಸಹೃದಯ ಬಳಗ ಮತ್ತು ತಾಲೂಕು ಇತಿಹಾಸ ವೇದಿಕೆ ಆಶ್ರಯದಲ್ಲಿ ಆಯೋಜಿಸಿದ್ದ ಸಾಗರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲು ಸುಮಾರು 12 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಸದ್ಯದಲ್ಲೇ ನೆಹರು ಮೈದಾನದಲ್ಲಿ ಟ್ಯಾಗೋರ್ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು ಎಂದರು.

ಆಪ್ಕೋಸ್ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು, ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಸಹೃದಯ ಬಳಗದ ಅಧ್ಯಕ್ಷ ಜಿ.ನಾಗೇಶ್, ಕೆ.ಎಚ್.ಜ್ಞಾನೇಶ್ವರಪ್ಪ, ಜಿ.ಪರಮೇಶ್ವರಪ್ಪ, ಚೇತನರಾಜ್ ಕಣ್ಣೂರು, ಲೋಕೇಶಕುಮಾರ್, ಡಾ. ಕೆಳದಿ ವೆಂಕಟೇಶ ಜೋಯಿಸ್, ಎಚ್.ಜಿ.ಶಿವಯೋಗಿ, ವಿ.ಟಿ.ಸ್ವಾಮಿ, ಎನ್.ಸಂತೋಷ್‌ಕುಮಾರ್ ಇತರರಿದ್ದರು.

ನಾಗರಾಜ ಜೋಗಿ ಜೋಗಿಪದ, ಶಾರದಾಂಬಾ ಸಾಂಸ್ಕೃತಿಕ ಕಲಾಕೇಂದ್ರದಿಂದ ಭರತನಾಟ್ಯ, ಶಿಯಾನ್ ಪಂಚಪ್ಪ ತಂಡದಿಂದ ಕರಾಟೆ ಪ್ರದರ್ಶನ, ದೈವಜ್ಞ ಚಿಣ್ಣರ ಚಂಡೆ ಬಳಗದಿಂದ ಚಂಡೆ ವಾದನ, ಡಾ. ನಟರಾಜ್ ಹುಲಿಕಲ್ ಮತ್ತು ತಂಡದಿಂದ ಪವಾಡ ರಹಸ್ಯ ಬಯಲು, ಕಾಮಿಡಿ ಕಿಲಾಡಿ ಖ್ಯಾತಿಯ ರಮೇಶ್ ಬಾಬು ಮೈಸೂರು ಅವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net