

ಕಿರುವಾರ ಎಸ್.ಸುದರ್ಶನ್ ಕೋಲಾರ
ನಗರಸಭೆಯಲ್ಲಿನ ಹಲವು ಹಗರಣಗಳ ತನಿಖೆಗಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನವಾಗಿದ್ದರೂ ಆಡಳಿತ ಮಂಡಳಿ ವಿಲಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಸದಸ್ಯರಿಂದ ಕೇಳಿ ಬಂದಿದೆ.
ಸ್ವಚ್ಛ ಭಾರತ್ ಯೋಜನೆಯಡಿ ಸ್ವಚ್ಛತಾ ಸಲಕರಣೆ ಖರೀದಿ, ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ತಯಾರಿಸಿ ಸಾರ್ವಜನಿಕರಿಗೆ ವಿತರಣೆ ಮಾಡಿರುವ ಆಹಾರಕ್ಕೆ ಅಕ್ರಮ ಬಿಲ್ ಸೃಷ್ಟಿ, ನೆಲಸಮ ಮಾಡಲು ಅಕ್ರಮವಾಗಿ ಬಿಲ್ಪಾವತಿ ಮಾಡಿರುವುದು, ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳಿಗೆ ಇ&ಖಾತೆ ನೀಡಿರುವ ಅಕ್ರಮ ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಬಗ್ಗೆ ಕೆಲ ಸದಸ್ಯರು ಪ್ರತ್ಯೇಕ ವಿಚಾರ ಮುಂದಿಟ್ಟುಕೊಂಡು ಪೌರಾಡಳಿತ ನಿರ್ದೇಶನಾಲಯ, ಸ್ಥಳಿಯ ಸಂಸ್ಥೆಗಳ ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಗರಸಭೆಯಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ವಿಚಾರವು 2024ರ ಅಕ್ಟೋಬರ್ 8ರಂದು ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ ಅಧ್ಯಕ್ಷತೆಯಲ್ಲಿ ಸುಧೀರ್ ಚರ್ಚೆಯಾಗಿ, ಲೋಕಾಯುಕ್ತರಿಗೆ ದೂರು ನೀಡಲು ತೀರ್ಮಾಸಿ 3 ತಿಂಗಳು ಕಳೆದರೂ ಕ್ರಮಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಭೆಯಲ್ಲಿ ಚರ್ಚೆಯಾದ ನಂತರ ಅಧ್ಯೆ ಲಕ್ಷಿ$್ಮದೇವಮ್ಮ, ಉಪಾಧ್ಯೆ ಸಂಗೀತಾ ಸೇರಿ ಸದಸ್ಯರೆಲ್ಲ ಒಮ್ಮತ ತೀರ್ಮಾನ ಕೈಗೊಂಡು, ಲೋಕಾಯುಕ್ತರಿಗೆ ದೂರು ನೀಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಇನ್ನೂ ದೂರು ನೀಡದೆ ಇರುವ ಬಗ್ಗೆ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಈಗ ಪ್ರತ್ಯೇಕವಾಗಿ ದೂರು ನೀಡಿದ್ದಾರೆ.
ಸಭೆ ನಡೆದು 3 ತಿಂಗಳು ಕಳೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಅದ ರ್ನಿಣಯವನ್ನು ಗಂಭೀರವಾಗಿ ಪರಿಗಣಿಸಿ ಇಷ್ಟೊತ್ತಿಗೆ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರವಾಗಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿ, ಸಿಬ್ಬಂದಿ ತಪು$್ಪ ಮಾಡಲು ಹೆದರುತ್ತಿದ್ದರು ಎಂಬುದು ಕೆಲ ಸದಸ್ಯರ ವಾದವಾಗಿದೆ. ಚುನಾಯಿತ ಮಂಡಳಿಯಿಂದ ತಡವಾಗಿರುವುದರಿಂದ ಸದಸ್ಯರೊಬ್ಬರು ವೈಯಕ್ತಿಕವಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ.
* ಯಾರ ರಕ್ಷಣೆಗೆ ಮುಂದು?
ಸ್ವಚ್ಛ ಭಾರತ್ ಮಿಷನ್&1.0 ಯೋಜನೆಯಡಿ 2.40 ಕೋಟಿ ರೂ. ಪೈಕಿ ಇವಿ ಟಾಟಾ ಎಸಿ 2 ಚಾರ್ಜರ್ಗಳಿಗೆ 6.25 ಲಕ್ಷ ರೂ., 35 ಎಚ್ಪಿ ಜೆಸಿಬಿ ಯಂತ್ರಕ್ಕೆ 35 ಲಕ್ಷ ರೂ., 6 ಸಿಸಿ ಕ್ಯಾಮರಾಗಳಿಗೆ ತಲಾ 94 ಸಾವಿರ ರೂ., ಪುಷ್ಕಾರ್ಟ್ಗಳ ಖರೀದಿಯಲ್ಲಿ ಅಕ್ರಮ ಕಂಡುಬಂದಿದ್ದು, ಈ ಬಗ್ಗೆ ವಿಜಯವಾಣಿ ಸಹ ವರದಿ ಮಾಡಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಸಂಬಂಧ ಇಂಜಿನಿಯರ್ ದಿಲೀಪ್ ಕುಮಾರ್ ವಿರುದ್ಧ ಕ್ರಮವಹಿಸಿದರಾದರೂ, ಉಳಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ?, ಯಾರನ್ನು ರಕ್ಷಣೆ ಮಾಡಲು ಮುಂದಾಗಿದ್ದೀರಿ? ಎಂಬುದು ಕೆಲ ಸದಸ್ಯರ ಪ್ರಶ್ನೆ.
* ದಾಖಲೆ ಇದ್ದರೂ ಕ್ರಮಕ್ಕೆ ಮೀನಮೇಷ
ನತ್ಯಾಜ್ಯ ಮತ್ತು ವಿಲೇವಾರಿ ಸ್ಥಳದ ಸಮೀಪದ ಜಾಗವನ್ನು ನೆಲಸಮಗೊಳಿಸಲು ನಗರಸಭೆಯ ಆರೋಗ್ಯ ನಿರೀಕ್ಷಕ ಬಿಲ್ಗಳನ್ನು ಸೃಷ್ಟಿ ಮಾಡಿ, ಅ.9ರಂದು 93,456 ರೂ. ಅ.13ರಂದು 86,848 ರೂ. ಮೊತ್ತವನ್ನು ಪಾವತಿ **** ಅಕ್ರಮ ಎಸಗಿರುವುದು ಕಂಡು ಬಂದಿರುತ್ತದೆ. ಈ ವಿಚಾರವಾಗಿ ಅಕ್ರಮ ಬಿಲ್ ಸಲ್ಲಿಸಿರುವ ವಿಚಾರವಾಗಿ ಸರ್ಕಾರದಿಂದ ಅನುಮತಿ ಪಡೆದು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಸರ್ವಾನುಮತದಿಂದ ರ್ನಿಣಯ ಕೈಗೊಳ್ಳಲಾಗಿತ್ತು. ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲು ಪೂರಕವಾದ ದಾಖಲೆ ಇದ್ದರೂ ಮೀನಮೇಷ ಎಣಿಸಲಾಗುತ್ತಿದೆ. ಅಲ್ಲಿಗೆ ಸಾಮಾನ್ಯ ಸಭೆಯ ರ್ನಿಣಯಗಳಿಗೆ ಬೆಲೆಯಿಲ್ಲವೆ? ಎಂದು ಕೆಲ ಸದಸ್ಯರು ಪ್ರಶ್ನಿಸಿದ್ದಾರೆ.
* ಇಂದಿರಾ ಕ್ಯಾಂಟೀನ್ನಲ್ಲೂ ಅವ್ಯವಹಾರ
ಕೋಲಾರ ನಗರದಲ್ಲಿನ ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ತಯಾರು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. ಇದರಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. 2022ರ ಏಪ್ರಿಲ್ 4ರಿಂದ 2023 ಮೇ 31ರತನಕ 4,95,328 ರೂ. 2023ರ 2023ರ ಸೆಪ್ಟೆಂಬರ್ 1ರಿಂದ 2024ರ ೆಬ್ರವರಿ 31ರವರೆಗೆ 19,92,958 ಹಾಗೂ 2024ರ ಏಪ್ರಿಲ್ 1ರಿಂದ 2024ರ ಮೇ31ರತನಕ 5,68,825 ರೂ. ಹೀಗೆ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಬಿಲ್ ಪಾವತಿ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇದರ ವಿರುದ್ಧವೂ ಕ್ರಮ ಜರುಗಿಸಲು ವ್ಯಾಪಕ ಒತ್ತಾಯ ಕೇಳಿ ಬಂದಿದೆ.
* ಅನಧಿಕೃತ ಬಡಾವಣೆಗೆ ಇ-ಖಾತೆ ಹಂಚಿಕೆ
ಕೋಲಾರ ನಗರ ಸಭೆಯಲ್ಲಿ ಇ&ಖಾತೆ ನೀಡಲಾಗಿರುವ ಬಗ್ಗೆಯಂತೂ ಭಾರಿ ಸದ್ದು ಮಾಡಿತ್ತು. ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಪಡೆಯದೆ, ಬಡಾವಣೆ ಅಭಿವೃದ್ಧಿಪಡಿಸದೆ, ಪಾರ್ಕ್, ಸಿಎ ಸೈಟ್ ಮೀಸಲಿಡದೆ ವಾರ್ಡ್ ನಂ&15ರ ವ್ಯಾಪ್ತಿಯಲ್ಲಿನ ಸರ್ವೇ ನಂ.19/1ಎ, 19/2ಸಿ, 20/1, 20/2ರ ಪೈಕಿ ಜಮೀನಿನಲ್ಲಿ 16 ನಿವೇಶನ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಇ&ಖಾತೆ ನೀಡಲು ಕಾನೂನು ಬಾಹಿರವಾಗಿ ಒಂದು ರಾತ್ರಿ ಸುಮಾರು 8 ಗಂಟೆಗೆ ಆನ್ಲೈನ್ನಲ್ಲಿ ಆಗಿನ ಪೌರಾಯುಕ್ತ ಶಿವಾನಂದ, ಕಂದಾಯ ಅಧಿಕಾರಿ ಅನಿಲ್ ಕುಮಾರ್, ಕಂದಾಯ ನಿರೀಕ್ಷಕ ಅಭಿಷೇಕ್ ಶಾಂತರಾಮ್ ಮಾನೆ ಹಾಗೂ ಕರ ವಸೂಲಿಗಾಗ ಬಿ.ಎಸ್.ಮಂಜುನಾಥ್ ಅವರು ಮಾಲೀಕ ಶಿವರಾಜ್ ಅವರೊಂದಿಗೆ ಶಾಮೀಲಾಗಿ ಇ&ಖಾತೆ ತೆಗೆದಿರುವುದು ಕಂಡು ಬಂದಿದ್ದು, ಇದರ ವಿರುದ್ಧವೂ ಲೋಕಾಯುಕ್ತರಿಗೆ ದೂರು ನೀಡಲು ತೀರ್ಮಾನಿಸಲಾಗಿದೆ.
ಕೋಟ್...
ಸಭೆಯಲ್ಲಿ ಚರ್ಚಿಸಿದ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಕ್ರಮವಹಿಸಲಾಗಿದ್ದು, ಶಾಸಕರಿಗೆ ಪತ್ರ ಕಳುಹಿಸಲಾಗಿದೆ. ಶಾಸಕರು ಬೆಂಗಳೂರಿನಲ್ಲಿ ಕೊಡುವುದಾಗಿ ಹೇಳಿದ್ದಾರೆ. ನಮ್ಮ ವಿರೋಧಿಗಳು ಏನೇನೋ ಹೇಳುತ್ತಾರೆ. ಅದಕ್ಕೆಲ್ಲ ಪ್ರತಿಕ್ರಿಯಿಸುವುದಿಲ್ಲ.
> ಲಕ್ಷ್ಮಿದೇವಮ್ಮ, ನಗರಸಭೆ ಅಧ್ಯೆ, ಕೋಲಾರ
ಕೋಟ್...
ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಂಡರೆ ಅದಕ್ಕೊಂದು ಬೆಲೆ ಇರುತ್ತದೆ. ತೀರ್ಮಾನವಾಗಿಯೂ ಕ್ರಮಕೈಗೊಳ್ಳದೆ ಇದ್ದರೆ ಏನರ್ಥ?. ಭ್ರಷ್ಟ ಅಧಿಕಾರಿಗಳನ್ನು ಶಿೆಗೆ ಒಳಪಡಿಸಬೇಕು.
> ಎಂ.ಸುರೇಶ್ ಬಾಬು, ನಗರಸಭೆ ಸದಸ್ಯ, ಕೋಲಾರ