

ಬೆಂಗಳೂರು: ಬಿಡಬ್ಲ್ಯೂಎಸ್ಎಸ್ಬಿ (BWSSB) ನಿರ್ಲಕ್ಷ್ಯಕ್ಕೆ ಬೆಂಗಳೂರಿನ ರಸ್ತೆಯಲ್ಲಿ ಕೃತಕ ಕಾರಂಜಿ ಸೃಷ್ಠಿಯಾಗಿದ್ದು ಅನೇಕ ಕಾರು ಚಾಲಕರು ಸಿಕ್ಕಿದ್ದೇ ಚಾನ್ಸ್ ಎಂದು ಉಚಿತವಾಗಿ ಕಾರ್ ವಾಶ್ ಮಾಡಿಕೊಂಡಿದ್ದಾರೆ.
ಕಾವೇರಿ ಪೈಪ್ ಒಡೆದು ಕುಡಿಯುವ ನೀರು ಪೋಲಾಗುತ್ತಿದ್ದು ಈ ಘಟನೆ ಯಶವಂತಪುರ ಎಂಇಐ ಬಸ್ ಸ್ಟಾಪ್ ಬಳಿ ನಡೆದಿದೆ. ಕಾವೇರಿ ಪೈಪ್ಲೈನ್ ಕನೆಕ್ಷನ್ ಬಳಿ ವಾಲ್ವ್ ಹೋದ ಪರಿಣಾಮ ಸುಮಾರು ಒಂದು ಗಂಟೆಗಳ ಕಾವೇರಿ ನೀರು ಪೋಲಾಗಿದೆ. ಸುಮಾರು 8 ರಿಂದ 10 ಅಡಿ ಎತ್ತರಲ್ಲಿ ನೀರು ಚಿಮ್ಮಿದ್ದು ಕಾವೇರಿ ನೀರಿನಲ್ಲಿ ಜನರು ಬಸ್, ಕಾರು ತೊಳೆಯುತ್ತಿದ್ದ ದೃಷ್ಯ ಕಂಡುಬಂದಿದೆ.
ಬಳಿಕ ಬಂದ BWSSB ವಾಟರ್ ಮ್ಯಾನ್, ಒಡೆದು ಹೋದ ಪೈಪ್ ಮೇಲೆ ಬಂಡೆ ಇಟ್ಟು ನೀರನ್ನು ನಿಯಂತ್ರಿಸಿದ್ದಾರೆ. ಕಾವೇರಿ ನೀರಿನಲ್ಲಿ ವ್ಯತ್ಯಯ ಇದೆ ಎಂದು ಜಲಮಂಡಳಿ ಹೇಳುತ್ತಾ ಮತ್ತೊಂದು ಕಡೆಯಲ್ಲಿ ನೀರು ಪೋಲಾಗುತ್ತಿದ್ದರೂ ನಿಯಂತ್ರಣ ಮಾಡಿಲ್ಲ.