ಕೊವಿಡ್​ ಆಸ್ಪತ್ರೆಯಲ್ಲಿ ಹಂದಿಗಳ ಬಿಂದಾಸ್​ ಓಡಾಟ; ಮಾಲೀಕನ ವಿರುದ್ಧ ದೂರು ನೀಡಿದ ಡಿಎಚ್​ಒ

Pigs
Published on

ರಾಯಚೂರು: ಇತ್ತೀಚೆಗಷ್ಟೇ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಹಂದಿಗಳು ಅಡ್ಡಾಡುತ್ತಿರುವ ಬಗ್ಗೆ ವರದಿಯಾಗಿತ್ತು. ಇದೀಗ ಅಂಥದ್ದೇ ದುರವಸ್ಥೆ ರಾಯಚೂರಿನ ಆಸ್ಪತ್ರೆಯಲ್ಲೂ ಕಂಡುಬಂದಿದೆ.

ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಒಪೆಕ್​ ಸೂಪರ್​ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಂದಿಗಳು ವಾರ್ಡ್​ ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿವೆ. ಆಸ್ಪತ್ರೆಯಲ್ಲಿ ಒಂದೆಡೆ ಸಂಗ್ರಹಿಸಲಾಗಿದ್ದ ಕಸ, ತ್ಯಾಜ್ಯಗಳನ್ನು ಈ ಹಂದಿಗಳು ಚೆಲ್ಲಾಪಿಲ್ಲಿ ಮಾಡಿದ್ದವು.

ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿಯ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದು, ಅವರು ಈ ಹಂದಿಗಳ ಮಾಲೀಕನ ವಿರುದ್ಧ ದೂರು ನೀಡಿದ್ದರು. ಇದೀಗ ರಾಯಚೂರು ನಗರಸಭೆ ಆ ಹಂದಿಗಳನ್ನು ಹಿಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net