More

    ರಾಹುಲ್​ ಗಾಂಧಿ ವಿರುದ್ಧ ಗುಲಾಂ ನಬಿ ಆಜಾದ್​ ಆಕ್ರೋಶ; ರಾಜೀನಾಮೆ ಕೊಡುವ ಮಾತಾಡಿದ ಹಿರಿಯ ನಾಯಕ

    ಎಐಸಿಸಿಯಲ್ಲಿ ಆಮೂಲಾಗ್ರ ಬದಲಾವಣೆ ಬೇಕು. ಪೂರ್ಣಾವಧಿಯ ಅಧ್ಯಕ್ಷರ ನೇಮಕವಾಗಬೇಕು ಎಂಬಿತ್ಯಾದಿ ವಿಚಾರಗಳನ್ನೊಳಗೊಂಡ ಪತ್ರವನ್ನು ಕಾಂಗ್ರೆಸ್​​ ನಾಯಕರು ಸೋನಿಯಾ ಗಾಂಧಿಯವರಿಗೆ ಬರೆದಿದ್ದಾರೆ.

    ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯೂ ನಡೆದಿದೆ. ಆದರೆ ಸಭೆ ನಡೆಯುತ್ತಿರುವಾಗ ರಾಹುಲ್​ ಗಾಂಧಿ ಕಾಂಗ್ರೆಸ್​ ಮುಖಂಡರಿಗೆ ಅಕ್ಷರಶಃ ಶಾಕ್​ ಕೊಟ್ಟಿದ್ದಾರೆ. ಸರಿಯಾದ ಸಮಯ ನೋಡಿಕೊಂಡು, ಬಿಜೆಪಿ ಜತೆ ಸೇರಿ ಕುತಂತ್ರ ಮಾಡಿದ್ದೀರಿ. ಹಾಗಾಗೇ ಪತ್ರ ಬರೆದಿದ್ದೀರಿ ಎಂದು ನೇರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಕರೆಗೆ ಟ್ವೀಟ್ ಡಿಲೀಟ್​ ಮಾಡಿದ್ರು ಸಿಬಲ್​

    ಇದೀಗ ಕಾಂಗ್ರೆಸ್ ಮುಖಂಡರೆಲ್ಲ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಹುಲ್​ ಗಾಂಧಿ ವಿರುದ್ಧ ತಿರುಗಿಬಿದ್ದರೆ ಪಕ್ಷದೊಳಗೆ ಸಂಪೂರ್ಣ ಅಲ್ಲೋಲಕಲ್ಲೋಲ ಉಂಟಾಗುತ್ತದೆ. ಹಾಗಾಗಿ ನಾಯಕರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದೊಂದೇ ದಾರಿ.
    ಹಾಗೇ, ಪತ್ರಕ್ಕೆ ಸಹಿ ಹಾಕಿದವರಲ್ಲಿ ಒಬ್ಬರಾದ ಕಾಂಗ್ರೆಸ್​ ಹಿರಿಯ ನಾಯಕ ಗುಲಾಮ್ ನಬಿ ಆಜಾದ್​ ಅವರು ರಾಹುಲ್​ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಬಿಜೆಪಿ ಜತೆ ಸೇರಿ ಕಾಂಗ್ರೆಸ್​ ವಿರುದ್ಧ ಪಿತೂರಿ ಮಾಡಿದ್ದು ಸಾಬೀತಾದರೆ, ಅದು ಸತ್ಯವೇ ಆದರೆ ನಾನು ಪಕ್ಷವನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾರೆ.

    ರಾಹುಲ್​ ಗಾಂಧಿ ಆರೋಪದಿಂದ ಸಿಟ್ಟಾಗಿರುವ ಗುಲಾಂ ನಬಿ ಆಜಾದ್​, ನಮ್ಮ ವಿರುದ್ಧ ಆರೋಪ ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.  ಹಾಗೇ, ಕಪಿಲ್​ ಸಿಬಲ್​ ಕೂಡ ರಾಹುಲ್​ ಗಾಂಧಿ ಆರೋಪಕ್ಕೆ ಖಡಕ್​ ಪ್ರತಿಕ್ರಿಯೆ ನೀಡಿ, ಬಳಿಕ ಅದನ್ನು ಡಿಲೀಟ್​ ಮಾಡಿದ್ದಾರೆ. (ಏಜೆನ್ಸೀಸ್​)

    ಬಿಜೆಪಿ ಜತೆ ಸೇರ್ಕೊಂಡು ಕುತಂತ್ರ ಮಾಡ್ತಿದ್ದೀರಲ್ಲ- ಪತ್ರಬರೆದವರ ವಿರುದ್ಧ ರಾಗಾ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts