PHOTOS: ಸೌಂದರ್ಯದ ರಹಸ್ಯ ಬಿಚ್ಚಿಟ್ಟಳು ಸುಂದರಿ!

Anastasiia Pokreshchuk
Published on

ಇನ್ನಷ್ಟು, ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಹಂಬಲದೊಂದಿಗೆ 31 ವರ್ಷದ ಆ ಯುವತಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾದ್ರು. ಸುಂದರವಾಗಿದ್ದ ಮುಖ ಕಾರ್ಟೂನ್ ಜೀವಿಯ ಮುಖದಂತೆ ಕಾಣತೊಡಗಿತ್ತು!ಇದು ಇನ್​ಸ್ಟಾಗ್ರಾಂ ಮಾಡೆಲ್ ಆಗಿರುವ ಉಕ್ರೇನ್​ ಯುವತಿಯ ಕಥೆ ಇದು!

ಆಕೆಯ ಹೆಸರು ಅನಸ್ಟಾಸಿಯಾ ಪೋಕ್ರೆಶ್​ಚುಕ್​.ಕೆನ್ನೆ ಚೆನ್ನಾಗಿ ಕಾಣಿಸಬೇಕು ಎಂದು ಆಕೆ ಪದೇಪದೆ ಇಂಜೆಕ್ಷನ್ ಮೂಲಕ ಫಿಲ್ಲರ್​ಗಳನ್ನು ತುಂಬುತ್ತಿದ್ದಳು. ಕಾಸ್ಮೆಟಿಕ್ ಫಿಲ್ಲರ್​ಗಳ ವ್ಯಸನಿಯಾಗಿಬಿಟ್ಟಿದ್ದಳು ಆಕೆ. ತನ್ನಿಷ್ಟದ ಲುಕ್​ ಬರಬೇಕು ಎಂದು ಆಕೆ ಈ ಎಲ್ಲ ಕಸರತ್ತುಗಳನ್ನು ಮಾಡುತ್ತಿದ್ದಳು. ಇಚ್ಛಿಸಿದ ರೂಪ ಬಿಟ್ಟುಬಿಡಿ.. ಭಯಾನಕವಾಗಿ ಕಾಣಿಸಿತೊಡಗಿದಳಾಕೆ. ತುಟಿ ಊದಿಕೊಳ್ಳತೊಡಗಿತು. ಕೆನ್ನೆಯ ಆಕಾರವೂ ಬದಲಾಯಿತು. ಇಷ್ಟಾದರೂ ಆಕೆ ಕಾಸ್ಮೆಟಿಕ್ ಇಂಜೆಕ್ಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಿಲ್ಲ!

ಅಂದ ಹಾಗೆ ಈ ಕಾರ್ಟೂನ್ ಕ್ರಿಯೇಚರ್ ಸುಂದರಿಗೆ ಇನ್​ಸ್ಟಾಗ್ರಾಂನಲ್ಲಿ ಒಂದೂವರೆ ಲಕ್ಷ ಫಾಲೋಯರ್ಸ್​ ಇದ್ದಾರೆ. ಮುಖ ವಿರೂಪವಾದ ಬಗ್ಗೆ ಒಂದಿಷ್ಟೂ ಬೇಸರಿಸದ ಆಕೆ, ಈ ಲುಕ್​ ನಂಗೆ ಇಷ್ಟವಾಗಿದೆ. ಈ ಹಿಂದೆ ನಾನು ಬೂದುಬಣ್ಣದ ಇಲಿ ತರ ಇದ್ದೆ ನೋಡೋದಕ್ಕೆ. ಮೂಗು ಬಹಳ ದೊಡ್ಡದಾಗಿ ಕಾಣ್ತಾ ಇತ್ತು. ಈಗ ಪರವಾಗಿಲ್ಲ. ತುಟಿ, ಕೆನ್ನೆಗಳೂ ಊದಿಕೊಂಡಿವೆ ಎಂದು ಟಿವಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಬಹಳ ಖುಷಿಯಿಂದ ಹೇಳಿಕೊಂಡಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net