More

    ಅಸ್ಸಾಂ ಬಿಜೆಪಿಯಲ್ಲಿ ಗ್ರೂಪಿಸಂ?: ಪಕ್ಷದಿಂದ ದೂರ ಸರಿದ ಶಾಸಕ ಶೈಲಾದಿತ್ಯ ದೇವ್​

    ಗುವಾಹಟಿ: ಬಿಜೆಪಿಯ ನಾಯಕರಲ್ಲಿ ಗ್ರೂಪಿಸಂ ಹೆಚ್ಚಾಗಿದೆ. ಪ್ರಾಮಾಣಿಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ಹೊಜೈ ಕ್ಷೇತ್ರದ ಶಾಸಕ ಶೈಲಾದಿತ್ಯ ದೇವ್ ಅವರು ಪಕ್ಷ ತ್ಯಜಿಸಿರುವುದಾಗಿ ಭಾನುವಾರ ಘೋಷಿಸಿದ್ದಾರೆ.

    ಸರ್ಕಾರದ ಅನೇಕ ವಿಚಾರಗಳ ಬಗ್ಗೆ ಭಿನ್ನಮತ ವ್ಯಕ್ತಪಡಿಸುವ ಮೂಲಕ ಕೆಲವು ತಿಂಗಳುಗಳಿಂದ ದೇವ್​ ಸುದ್ದಿಯಲ್ಲಿದ್ದಾರೆ. ಭಾನುವಾರ ಸುದ್ದಿಗೋಷ್ಠಿ ನಡೆಸಿದ ದೇವ್​, ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ದೇನೆ ಎಂದು ಯಾರೂ ಹೇಳಲಾರರು. ದೆಹಲಿಯಲ್ಲಿ 17 ವರ್ಷ ಕೆಲಸ ಮಾಡಿದ್ದೇನೆ. ಸಚಿವಾಲಯದಲ್ಲೂ ಕಾರ್ಯನಿರ್ವಹಿಸಿದ್ದೇನೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮಂಥವರಿಗೆ ಯಾರೂ ಬೆಲೆ ನೀಡುತ್ತಿಲ್ಲ. ನಮ್ಮ ರಾಜಕೀಯವಾಗಿ ಮುಗಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತಿದ್ದಾರೆ. ಹಾಗಾಗಿ ನನ್ನ ಸ್ವಾಭಿಮಾನ, ಘನತೆಗೆ ಧಕ್ಕೆಯಾಗದಂತೆ ಪಕ್ಷ ರಾಜಕಾರಣದಿಂದ ದೂರ ಇರುತ್ತೇನೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೋವಿಡ್​ ಪಾರ್ಟಿ ಅಟೆಂಡ್ ಮಾಡಿ ನಾನು ತಪ್ಪೆಸಗಿದೆ – ಡೆತ್​ ಬೆಡ್​ನಲ್ಲಿ ಯುವಕನ ಕೊನೇ ಮಾತು

    ಸಂಕಷ್ಟದ ಸನ್ನಿವೇಶದಲ್ಲಿ ನಿರ್ಧಾರ ತೆಗೆದುಕೊಳ್ಳಬಲ್ಲ ಒಬ್ಬ ನಾಯಕ ಪಕ್ಷದಲ್ಲಿಲ್ಲ. ಹಲವಾರು ನಾಯಕರು ಇರುವ ಕಾರಣ ಅಷ್ಟೂ ಜನರಿಗೆ ನನ್ನ ಸಂಕಷ್ಟವನ್ನು ಹೇಳುತ್ತ ಹೋಗಲು ಸಾಧ್ಯವಿಲ್ಲ. ದೇಶಕ್ಕೆ ಒಬ್ಬ ನಾಯಕ ಇದ್ದಾರೆ. ಅವರು ನರೇಂದ್ರ ಮೋದಿ. ಅಂತಹ ನಾಯಕ ಅಸ್ಸಾಂನಲ್ಲಿ ಇಲ್ಲ. ಬಹುಶಃ ನಾನು ಇಂದಿನ ಬಿಜೆಪಿಗೆ ಅನ್​ಫಿಟ್ ಆಗಿರಬಹುದು. ನಾನು ಈಗಲೇ ಹೊರ ಹೋದರೆ ಪಕ್ಷಕ್ಕೆ ಆಘಾತ ನೀಡಿದಂತಾಗಬಹುದು. ಪಕ್ಷಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲ. ಬದಲಾಗಿ ಪಕ್ಷದಿಂದ ನಿವೃತ್ತನಾಗುತ್ತೇನೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟರೆ ನಾನು ಕಾಂಗ್ರೆಸ್​ಗೋ, ಎಐಯುಡಿಎಫ್​ಗೋ ಸೇರಬಹುದು ಎಂಬ ಸಂದೇಶ ರವಾನೆಯಾಗುತ್ತದೆ. ನಾನು ನನ್ನ ಶಾಸಕತ್ವದ ಐದು ವರ್ಷದ ಮುಂದಿನ ವರ್ಷ ಮುಗಿಯಲಿದೆ. ಅದನ್ನು ಅವಧಿ ಮುಗಿಸುತ್ತೇನೆ. ಬಳಿಕ ನಿವೃತ್ತನಾಗುತ್ತೇನೆ ಎಂದು ದೇವ್ ಸ್ಪಷ್ಟಪಡಿಸಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ಅಸ್ಸಾಂ ವಿಧಾನಸಭೆಯಲ್ಲಿನ 126 ಸದಸ್ಯ ಸ್ಥಾನದ ಪೈಕಿ ಬಿಜೆಪಿಗೆ 60, ಮಿತ್ರ ಪಕ್ಷಗಳಾದ ಎಜಿಪಿ 14, ಬಿಪಿಎಫ್​ನ 12 ಶಾಸಕರಿದ್ದಾರೆ. ಇವರ ಹೊರತಾಗಿ ಒಬ್ಬ ಪಕ್ಷೇತರ ಶಾಸಕನ ಬೆಂಬಲವೂ ಸರ್ಕಾರಕ್ಕೆ ಇದೆ. (ಏಜೆನ್ಸೀಸ್)

    ಯುಕಾಲಿಪ್ಟಸ್​ ನೆಕ್ಲೆಸ್​ ಧರಿಸಿದ್ರೆ ಕರೊನಾ ಸೋಂಕು ಹತ್ತಿರವೂ ಸುಳಿಯಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts