More

    ಈ ನೆಕ್ಲೆಸ್ ಪವಾಡ ಮಾಡತ್ತಂತೆ!

    ಜಕಾರ್ತಾ: ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಜಗತ್ತು ನರಳುತ್ತಿರಬೇಕಾದರೆ, ಔಷಧ ಸಿಗಬಹುದೇ ಎಂಬ ನಿರೀಕ್ಷೆ ಕಾತರ ಎಲ್ಲ ಕಡೆಗಳಲ್ಲೂ ಇದೆ. ಅನೇಕ ಸಂಶೋಧನೆ, ಪ್ರಯೋಗಗಳು ನಿರಂತರವಾಗಿ ಆಗುತ್ತಿವೆ. ಆಯುರ್ವೇದ, ಯುನಾನಿ, ಸಿದ್ಧ, ಆಲೋಪತಿ ಹೀಗೆ ಯಾವ್ಯಾವ ಮಾದರಿಯ ವೈದ್ಯ ಪದ್ಧತಿಗಳಿವೆಯೋ ಎಲ್ಲದರಲ್ಲೂ ಔಷಧಕ್ಕಾಗಿ ಹುಡುಕಾಟ ನಡೆದಿದೆ. ಈ ಬೆಳವಣಿಗೆಯ ನಡುವೆ ಯುಕಾಲಿಪ್ಟಸ್​ ನೆಕ್ಲೆಸ್​ ಧರಿಸಿದರೆ ಅಂಥವರ ಹತ್ತಿರವೂ ಕರೊನಾ ಸೋಂಕು ಸುಳಿಯದು ಎಂದು ಇಂಡೋನೇಷ್ಯಾ ಕೃಷಿ ಸಚಿವಾಲಯ ಹೇಳಿಕೊಂಡಿದೆ!

    ಕೃಷಿ ಸಚಿವಾಲಯದ ಅಧೀನ ಇರುವ ಆರೋಗ್ಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬಾಲ್ಟಿಬನ್ಗ್​ಟನ್​ ಸೋ ಕಾಲ್ಡ್​ ಆ್ಯಂಟಿ ವೈರಸ್ ನೆಕ್ಲೆಸ್​ ಅನ್ನು ಅಭಿವೃದ್ಧಿ ಪಡಿಸಿದೆ. ಕೃಷಿ ಸಚಿವ ಸಿಯಾಹ್ರುಲ್​ ಯಾಸಿನ್ ಲಿಂಪೊ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ನೋವೆಲ್ ಕರೊನಾ ವೈರಸ್ ಅನ್ನು ಕೊಲ್ಲಬಲ್ಲ ಯುಕಾಲಿಪ್ಟಸ್​ ತಳಿಯಿಂದ ಈ ನೆಕ್ಲೆಸ್ ಅನ್ನು ಅಭಿವೃದ್ದಿಪಡಿಸಲಾಗಿದೆ. ಕೇವಲ 15 ನಿಮಿಷ ಇದನ್ನು ಧರಿಸಿದರೆ ಶೇಕಡ 42 ಭಾಗದಷ್ಟು ಕರೊನಾ ವೈರಸ್​ ಅನ್ನು ಅದು ಕೊಲ್ಲುತ್ತದೆ. 30 ನಿಮಿಷ ಧರಿಸಿದರೆ ಅದರ ಪರಿಣಾಮವೂ ದುಪ್ಪಟ್ಟಾಗಿರುತ್ತದೆ.

    ಇದನ್ನೂ ಓದಿ: ಸಮುದಾಯಕ್ಕೆ ಹರಡಿತಾ ಸೋಂಕು?

    ಕೋವಿಡ್​ 19 ಸೋಂಕು ತಡೆಗೆ ಅಥವಾ ಅದರ ಚಿಕಿತ್ಸೆಗಾಗಿ ಪ್ರಕೃತಿದತ್ತವಾದ ಉತ್ಪನ್ನಗಳನ್ನೇ ಬಳಸಿ ಯುಕಾಲಿಪ್ಟಸ್​ ನೆಕ್ಲೆಸ್​ ಅನ್ನು ಸಿದ್ಧಪಡಿಸಲಾಗಿದೆ. ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆ ಶುರುವಾಗಲಿದೆ. ಯುಕಾಲಿಪ್ಟಸ್​ನ ಏಳುನೂರು ತಳಿಗಳು ನಮ್ಮ ಲ್ಯಾಬ್​ನಲ್ಲಿವೆ. ಅವುಗಳನ್ನು ಪರಿಶೀಲಿಸಿದಾಗ ಕರೊನಾ ವೈರಸ್​ ಕೊಲ್ಲುವುದಕ್ಕೆ ಇವು ಉಪಯುಕ್ತ ಎಂದು ಕಂಡುಬಂತು. ನಾವೂ ಇದನ್ನು ಬಳಸಿ ನೋಡಿದ್ದೇವೆ. ಚೂರಿ, ಬ್ಲೇಡ್ ತಾಗಿ ಅಥವಾ ಇನ್ಯಾವುದೇ ಗಾಯ ಆದರೆ ಅದಕ್ಕೆ ಇದನ್ನು ಹಚ್ಚಿದರೆ ಆ ಗಾಯ ಕೂಡ ವಾಸಿಯಾಗುತ್ತದೆ.

    ಇದನ್ನೂ ಓದಿ: ಡ್ರೋನ್ ಪ್ರತಾಪ ಕ್ವಾರಂಟೈನ್​ನಲ್ಲಿದ್ದಾರಂತೆ..

    ಕೃಷಿ ಸಚಿವಾಲಯದ 20 ಉದ್ಯೋಗಿಗಳೂ ಕೋವಿಡ್​ 19 ಪಾಸಿಟಿವ್ ಖಚಿತವಾದವರೂ ಈ ಪ್ರಯೋಗಕ್ಕೆ ಒಳಗಾಗಿದ್ದಾರೆ. ಅವರ ಚಿಕಿತ್ಸೆಯಲ್ಲೂ ಇದು ಫಲಪ್ರದವಾಗಿದೆ. ಅವರ ಉಸಿರಾಟದ ಸಮಸ್ಯೆ ನಿವಾರಣೆಯಾಗಿದೆ ಎಂದು ಬಾಲಿಟ್​ಬನ್ಗ್​ಟನ್​ ಮುಖ್ಯಸ್ಥ ಫಾ​ಜ್ರೈ ಜುಫ್ರೆ ಹೇಳಿದ್ದಾರೆ. ಒಟ್ಟಿನಲ್ಲಿ ಈ ವಿಲಕ್ಷಣ ನೆಕ್ಲೆಸ್ ಔಷಧ ಈಗ ಜಗತ್ತಿನ ಗಮನಸೆಳೆದಿರುವುದು ವಾಸ್ತವ. (ಏಜೆನ್ಸೀಸ್)

    ಕೋವಿಡ್​ ನನ್ನ ಯಾಮಾರಿಸಿಬಿಡ್ತು- ಡೆತ್​ ಬೆಡ್​ನಲ್ಲಿ ಮಲಗಿಕೊಂಡು ಯುವಕನ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts