ಇತಿಹಾಸ ಮರುಸೃಷ್ಟಿಸುವ ಛಾಯಾಚಿತ್ರಗಳು

01koppa01
ಕೊಪ್ಪದಲ್ಲಿ ಹಮ್ಮಿಕೊಂಡಿದ್ದ ಕ್ರಿಯೆಟಿವ್ ಪೋಟೋ ಕ್ಲಬ್ ಕಾರ್ಯಗಾರದಲ್ಲಿ ಹಿರಿ ಛಾಯಚಿತ್ರಾಕಾರನ್ನು ಗೌರವಿಸಲಾಯಿತು. ಬಾಬು ಮೈಸೂರು ಇದ್ದರು.
Published on

ಕೊಪ್ಪ: ಛಾಯಾಚಿತ್ರಗಳು ಎಲ್ಲ ಕಾಲಕ್ಕೂ ಪ್ರತ್ಯಕ್ಷ ಸಾಕ್ಷಿಗಳಂತೆಯೇ ಉಳಿದು ನೋಡುಗರ ಕಣ್ಣಮುಂದೆ ಇತಿಹಾಸದ ಘಟನೆಗಳನ್ನು ಮರುಸೃಷ್ಟಿಸುತ್ತವೆ ಎಂದು ಪೋಟೋಗ್ರಫಿ ಟ್ರೈನರ್ ಬಾಬು ಮೈಸೂರು ತಿಳಿಸಿದರು.
ತಾಲೂಕಿನ ಪೋಟೊಗ್ರಾಫರ್ ಅಸೋಷಿಯೇಷನ್‌ನಿಂದ ಹಮ್ಮಿಕೊಂಡಿದ್ದ ಕ್ರಿಯೆಟಿವ್ ಪೋಟೋ ಕ್ಲಬ್ ಕಾರ್ಯಗಾರದಲ್ಲಿ ಸದಸ್ಯರಿಗೆ ತರಬೇತಿ ನೀಡಿ ಮಾತನಾಡು, ಚಿತ್ರಗಳನ್ನು ದಾಖಲಿಸುವ, ಶೇಖರಿಸುವ ಮತ್ತು ಇನ್ನೊಂದು ಕಡೆಗೆ ವರ್ಗಾಯಿಸಲು ಸಹಾಯ ಮಾಡುವ ಸಾಧನ ಕ್ಯಾಮರ. ಸುಧಾರಿತ ತಂತ್ರಜ್ಞಾನ ಮತ್ತು ನವೀಕೃತ ಛಾಯಾಗ್ರಹಣದ ಆಸಕ್ತಿ ಇಂದು ಹವ್ಯಾಸ ಮತ್ತು ವೃತ್ತಿಯಾಗಿ ಬೇಡಿಕೆ ಹೆಚ್ಚಿದೆ ಎಂದರು.
ವಿಶಾಲ ಅವಕಾಶವಿರುವ ೆಟೋಗ್ರಫಿಯಲ್ಲಿ ನಿಮ್ಮ ಇಷ್ಟದ ಕ್ಷೇತ್ರವನ್ನು ್ಯಾಷನ್, ುಡ್, ಸ್ಪೋರ್ಟ್ಸ್, ಟ್ರಾವೆಲ್, ವೈಲ್ಡಲೈಫ್, ವೆಡ್ಡಿಂಗ್, ಸ್ಟಿಲ್‌ಲ್ೈ, ೆಟೋ ಜರ್ನಲಿಸಂ, ಮಾಡೆಲ್ ೆಟೋಗ್ರಫಿ ಇತ್ಯಾದಿ ವಿಭಾಗಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಬಹುದು. ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಮಾಡುವ ವೃತ್ತಿ ಜೀವನ ಯಶಸ್ವಿಯಾಗಲು ಪರಿಣಾಮಕಾರಿ ತರಬೇತಿ ಅಗತ್ಯ ಎಂದು ಹೇಳಿದರು.
ಪೋಟೊಗ್ರಾಫರ್ ಅಸೋಷಿಯೇಷನ್ ಅಧ್ಯಕ್ಷ ಸಂದೀಪ್ ಮಾತನಾಡಿ, ನಮ್ಮೊಂದಿಗೆ ಬಾಬು ಅವರು ಹಂಚಿಕೊಂಡಿರುವ ಸಲಹೆಗಳು ಮತ್ತು ತಂತ್ರಗಳು ನಿಜವಾಗಿ ಸಹಾಯಕವಾಗಿವೆ. ಸದಸ್ಯರು ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹಿರಿಯ ಛಾಯಚಿತ್ರಾಕಾರಾ ಸತೀಶ್ ಕಾಗಲಗೋಡು, ಬಸವರಾಜ್, ಜಾರ್ಜ್ ಹಾಗೂ ರಮೇಶ್ ಜಯಪುರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಂಘ ಉಪಾಧ್ಯಕ್ಷ ದುರ್ಗೇಶ್, ದಿನೇಶ್ ನಾಗರಾಜ್, ಸಂತೋಷ್, ಹರೀಶ್, ಆದರ್ಶ, ಬರ್ಕತ್, ಕುಮಾರ, ಅರವಿಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net