PHOTO GALLERY | ವಿಜಯಾನಂದ ಚಿತ್ರದ ಟ್ರೇಲರ್ ರಿಲೀಸ್ ಸಮಾರಂಭದ ಸಂಭ್ರಮದ ಕ್ಷಣಗಳು..

Vijayanand F
Published on

ಬೆಂಗಳೂರು: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಸಿನಿಮಾದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರ ಒರಾಯನ್ ಮಾಲ್​ನಲ್ಲಿ ಬಿಡುಗಡೆ ಮಾಡಿದರು. ವಿಆರ್​ಎಲ್​ ಫಿಲ್ಮ್​ ಪ್ರೊಡಕ್ಷನ್ಸ್​ನ ಚೊಚ್ಚಲ ನಿರ್ಮಾಣದ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಐದೂ ಭಾಷೆಗಳಲ್ಲೂ ಇಂದು ಟ್ರೇಲರ್ ಬಿಡುಗಡೆಗೊಂಡಿತು.

ಈ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಅವರ ಪತ್ನಿ ವಾಣಿ ಸಂಕೇಶ್ವರ, ಪುತ್ರ ಶಿವ ಸಂಕೇಶ್ವರ, ವಿಜಯ ಸಂಕೇಶ್ವರ ಅವರ ಪತ್ನಿ ಲಲಿತಾ ಸಂಕೇಶ್ವರ ಉಪಸ್ಥಿತರಿದ್ದರು. ಚಿತ್ರದ ನಾಯಕ ನಿಹಾಲ್, ನಿರ್ದೇಶಕಿ ರಿಶಿಕಾ, ನಟಿ ವಿನಯಾಪ್ರಸಾದ್, ವಿತರಕ ಜಾಕ್ ಮಂಜು ಮುಂತಾದವರು ಭಾಗವಹಿಸಿದ್ದರು.

ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ರೇಲರ್​ಗಳು ಭಾರಿ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗುತ್ತಿದ್ದು, ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಂತನಾಗ್, ರವಿಚಂದ್ರನ್ ಅವರಂಥ ಘಟಾನುಘಟಿಗಳು ಅಭಿನಯಿಸಿರುವ ಈ ಸಿನಮಾ ಡಿಸೆಂಬರ್ 9ರಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

Vijayanand 4
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ.ಕೆ.ಸುಧಾಕರ್ ಅವರಿಂದ ಟ್ರೇಲರ್ ಬಿಡುಗಡೆ. ವಿಜಯಸಂಕೇಶ್ವರ-ಲಲಿತಾ ಸಂಕೇಶ್ವರ ದಂಪತಿ, ಆನಂದ ಸಂಕೇಶ್ವರ ಅವರ ಉಪಸ್ಥಿತಿ.
Vijayanand 5
Vijayanand 6
ಟ್ರೇಲರ್ ಬಿಡುಗಡೆ ಮಾಡಿದ ಸಂಭ್ರಮದ ಕ್ಷಣ
Vijayanand 7
Vijayanand 8
ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್ ಅವರಿಂದ ಟ್ರೇಲರ್ ವೀಕ್ಷಣೆ
Vijayanand 9
ವಿಜಯ ಸಂಕೇಶ್ವರ ಅವರ ಪತ್ನಿ ಲಲಿತಾ ಸಂಕೇಶ್ವರ, ಆನಂದ ಸಂಕೇಶ್ವರ ಅವರ ಪತ್ನಿ ವಾಣಿ ಸಂಕೇಶ್ವರ ಅವರಿಂದ ಟ್ರೇಲರ್ ವೀಕ್ಷಣೆ
Vijayanand 10
Vijayanand 11
ಟ್ರೇಲರ್ ಬಿಡುಗಡೆ ಸಂಭ್ರಮದಲ್ಲಿ ಸಚಿವ ಸುಧಾಕರ್, ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ, ಅವರ ಪತ್ನಿ ವಾಣಿ ಸಂಕೇಶ್ವರ, ನಟಿ ವಿನಯಾಪ್ರಸಾದ್.
Vijayanand 12
ಟ್ರೇಲರ್ ಬಿಡುಗಡೆ ಸಂಭ್ರಮದಲ್ಲಿ ಆನಂದ ಸಂಕೇಶ್ವರ, ಅವರ ಪುತ್ರ ಶಿವ ಸಂಕೇಶ್ವರ, ಚಿತ್ರದ ನಾಯಕ ನಿಹಾಲ್, ನಿರ್ದೇಶಕಿ ರಿಶಿಕಾ, ಜಾಕ್ ಮಂಜು.

ಬೆಂಗಳೂರು: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಸಿನಿಮಾದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರ ಒರಾಯನ್ ಮಾಲ್​ನಲ್ಲಿ ಬಿಡುಗಡೆ ಮಾಡಿದರು. ವಿಆರ್​ಎಲ್​ ಫಿಲ್ಮ್​ ಪ್ರೊಡಕ್ಷನ್ಸ್​ನ ಚೊಚ್ಚಲ ನಿರ್ಮಾಣದ ಈ ಸಿನಿಮಾ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದ್ದು, ಐದೂ ಭಾಷೆಗಳಲ್ಲೂ ಇಂದು ಟ್ರೇಲರ್ ಬಿಡುಗಡೆಗೊಂಡಿತು.

ಈ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಅವರ ಪತ್ನಿ ವಾಣಿ ಸಂಕೇಶ್ವರ, ಪುತ್ರ ಶಿವ ಸಂಕೇಶ್ವರ, ವಿಜಯ ಸಂಕೇಶ್ವರ ಅವರ ಪತ್ನಿ ಲಲಿತಾ ಸಂಕೇಶ್ವರ ಉಪಸ್ಥಿತರಿದ್ದರು. ಚಿತ್ರದ ನಾಯಕ ನಿಹಾಲ್, ನಿರ್ದೇಶಕಿ ರಿಶಿಕಾ, ನಟಿ ವಿನಯಾಪ್ರಸಾದ್, ವಿತರಕ ಜಾಕ್ ಮಂಜು ಮುಂತಾದವರು ಭಾಗವಹಿಸಿದ್ದರು.

ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಟ್ರೇಲರ್​ಗಳು ಭಾರಿ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಗಾಗುತ್ತಿದ್ದು, ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಹಾಗೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನಂತನಾಗ್, ರವಿಚಂದ್ರನ್ ಅವರಂಥ ಘಟಾನುಘಟಿಗಳು ಅಭಿನಯಿಸಿರುವ ಈ ಸಿನಮಾ ಡಿಸೆಂಬರ್ 9ರಂದು ಜಗತ್ತಿನಾದ್ಯಂತ ಏಕಕಾಲದಲ್ಲಿ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net