ಸಿನಿಮಾ ಸ್ಟಾರ್ಗಳು ಅಷ್ಟು ಸುಲಭದಲ್ಲಿ ಕೈಗೆ ಸಿಗುವಂಥವರಲ್ಲ. ಅಭಿಮಾನಿಗಳಿಗೂ ಅವರು ಅದೆಷ್ಟೋ ಸಲ ನಿಲುಕದ ನಕ್ಷತ್ರದಂತೆಯೇ ಇರುತ್ತಾರೆ. ಇನ್ನು ಸೂಪರ್ಸ್ಟಾರ್ ಎಂದರೆ ಕೇಳಬೇಕೇ? ಭೇಟಿ, ಫೋಟೋ, ಮಾತುಕತೆ ಎಲ್ಲವೂ ಕಷ್ಟವೇ. ಆದರೆ ಇಂದು ಅದಕ್ಕೆ ಅಪವಾದ ಎಂಬಂತೆ ಸೂಪರ್ಸ್ಟಾರ್ ರಜಿನಿಕಾಂತ್ ನಡೆದುಕೊಂಡಿದ್ದಾರೆ. ಅರ್ಥಾತ್ ಬೆಂಗಳೂರಿನಲ್ಲಿ ಅವರಿಂದು ಸಾಕ್ಷಾತ್ ನಿಲುಕಿದ ನಕ್ಷತ್ರವೇ ಆಗಿದ್ದಾರೆ.
ಬೆಂಗಳೂರಿನ ಜಯನಗರದ ಬಿಎಂಟಿಸಿ ಡಿಪೋ, ಮಠ.. ಹೀಗೆ ತಮ್ಮ ಹಳೆಯ ನೆನಪುಗಳಿರುವ ಜಾಗಗಳಿಗೆ ಅವರು ಅತ್ಯಂತ ಸರಳವಾಗಿ ಹೋಗಿ ಸರಾಗವಾಗಿ ಜನರೊಂದಿಗೆ ಬೆರೆತಿದ್ದಾರೆ. ಜನರು ಅವರನ್ನು ಭೇಟಿಯಾಗಿ, ಕೈಕುಲುಕಿ, ಫೋಟೋ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ರಜಿನಿಕಾಂತ್ ಮುಕ್ತ ಸಂಚಾರ, ಅದು ಅವರ ಅಭಿಮಾನಿಗಳಲ್ಲಿ ಮೂಡಿಸಿದ ಸಂಚಲನದ ಕೆಲವು ಝಲಕ್ಗಳು ಇಲ್ಲಿವೆ.