

ಬೆಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಪೋನ್ ಕದ್ದಾಲಿಕೆ ಪ್ರಕರಣ ಮತ್ತೆ ಸುದ್ದಿಯಾಗಿದೆ.
ಸಮ್ಮಿಶ್ರ ಸರ್ಕಾರವಿದ್ದ ಅವಧಿಯಲ್ಲಿ ನಿರ್ಮಲಾನಂದ ಸ್ವಾಮೀಜಿ ಪೋನ್ ಟ್ಯಾಪಿಂಗ್ ಮಾಡಲಾಗಿದೆ ಎಂದು ಆರೋಪಿಸಿ ಬುಧವಾರ ಕಾಂಗ್ರೆಸ್ ವಕ್ತಾರ ಸಿದ್ದರಾಜು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಈ ವೇಳೆ ದೂರುದಾರ ಸಿದ್ದರಾಜ ಮಾತನಾಡಿ. ಕುಮಾರಸ್ವಾಮಿ ಸಿದ್ದಾಂತ ಬಗ್ಗೆ ಬಹಳ ಮಾತನಾಡುತ್ತಾರೆ. ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಯಾರ ಯಾರ ಪೋನ್ ಟ್ಯಾಪಿಂಗ್ ಮಾಡಬೇಕು ಎಂಬುದರ ಬಗ್ಗೆ ಟೀಂ ಮಾಡಲಾಗಿತ್ತು. ಆ ಪ್ರಕರಣ ತನಿಖೆ ಏನಾಗಿದೆ ಅಂತ ಸರಿಯಾಗಿ ಗೊತ್ತಾಗಿಲ್ಲ.
ಪ್ರಕರಣ ಸಿಬಿಐನಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ೆನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಕಾನೂನಿನ ಸಲಹೆ ಪಡೆದು ಮುಂದುವರಿಯುವ ಬಗ್ಗೆ ಕಮೀಷನರ್ ಹೇಳಿದ್ದಾರೆ ಎಂದು ಸಿದ್ದರಾಜು ತಿಳಿಸಿದ್ದಾರೆ.