

ಮನಿಲಾ: ರಷ್ಯಾ ಸಂಶೋಧಿಸಿರುವ ಲಸಿಕೆ ಬಗ್ಗೆ ಬಗ್ಗೆ ಮೆಚ್ಚುಗೆ ಹಲವು ಅಪಸ್ವರಗಳು ಕೇಳಿ ಬಂದಿವೆ. ಇನ್ನೊಂದೆಡೆ, ಹಲವು ದೇಶಗಳಿಂದ ಬೇಡಿಕೆಯೂ ಬಂದಿದೆ ಎಂದು ರಷ್ಯಾ ತಿಳಿಸಿದೆ.
ಈ ನಡುವೆ, ರಷ್ಯಾ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಸಾರ್ವತ್ರಿಕವಾಗಿ ತೆಗೆದುಕೊಂಡು ಪ್ರಯೋಗಾರ್ಥಿಯಾಗಿ ಭಾಗಿಯಾಗುವುದಾಗಿ ಫಿಲಿಪ್ಪೈನ್ಸ್ ಅಧ್ಯಕ್ಷರ ರಾಡ್ರಿಗೋ ಡ್ಯುಟರ್ಟಿ ಹೇಳಿದ್ದಾರೆ.
ಕರೊನಾ ನಿಗ್ರಹಕ್ಕಾಗಿ ರಷ್ಯಾ ನಡೆಸಿರುವ ಸಂಶೋಧನೆಯಲ್ಲಿ ಅತೀವ ವಿಶ್ವಾಸ ಹೊಂದಿರುವುದಾಗಿ ಪುಟಿನ್ಗೆ ಹೇಳುತ್ತೇನೆ. ನೀವು ತಯಾರಿಸಿರುವ ಲಸಿಕೆ ಮಾನವಕುಲಕ್ಕೆ ಭಾರಿ ಪ್ರಯೋಜನಕಾರಿಯಾಗಲಿದೆ ಎಂದು ಸಂದರ್ಶನವೊಂದರಲ್ಲಿ ರಾಡ್ರಿಗೋ ತಿಳಿಸಿದ್ದಾರೆ.
ರಷ್ಯಾ ಉತ್ಪಾದಿಸಿರುವ ಲಸಿಕೆಯ ಕ್ಲಿನಿಕಲ್ ಟ್ರಯಲ್ಗೆ ಸಿದ್ಧವಿರುವುದಾಗಿ ಫಿಲಿಪ್ಪೈನ್ಸ್ ಘೋಷಿಸಿದೆ. ಇದಲ್ಲದೇ, ಉತ್ಪಾದನೆಗೂ ಮಾಸ್ಕೋ ಜತೆ ಸಹಕರಿಸುವುದಾಗಿ ತಿಳಿಸಿದೆ.
ಫಿಲಿಪ್ಪೈನ್ಸ್ಗೆ ಲಸಿಕೆಯನ್ನು ನೀಡುವುದಾಗಿ ತಿಳಿಸಿರುವ ರಷ್ಯಾದ ಕ್ರಮವ್ಮು ಅಧ್ಯಕ್ಷ ರಾಡ್ರಿಗೋ ಸ್ವಾಗತಿಸಿದ್ದಾರೆ. ಇದು ಉಚಿತವಾಗಿ ನೀಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ.
ಲಸಿಕೆ ಬಂದಾಗ ಅದನ್ನು ಸ್ವೀಕರಿಸಲು ಇಲ್ಲಿ ಪ್ರಯೋಗಾರ್ಥಿಗಳು ಇರಲಿದ್ದಾರೆ. ನಾನೇ ಮೊದಲಿಗನಾಗಿ, ಸಾರ್ವಜನಿಕರೆದುರು ಬಹಿರಂಗವಾಗಿ ಲಸಿಕೆ ತೆಗೆದುಕೊಳ್ಳುತ್ತೇನೆ ರಾಡ್ರಿಗೋ ಹೇಳಿದ್ದಾರೆ. ಲಸಿಕೆ ಪೂರೈಕೆ ಹಾಗೂ ಕ್ಲಿನಿಕಲ್ ಟ್ರಯಲ್ ಬಗ್ಗೆ ಪುಟಿನ್ ಜತೆಗೆ ರಾಡ್ರಿಗೋ ಮಾತುಕತೆ ನಡೆಸಲಿದ್ದಾರೆ.