

Philippines Earthquake: ಸೆಂಟ್ರಲ್ ಫಿಲಿಪೈನ್ಸ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಕನಿಷ್ಠ 22 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮಂಗಳವಾರ (ಸೆ.30) ತಡರಾತ್ರಿ ಮಧ್ಯ ಫಿಲಿಪೈನ್ಸ್‌ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕಲ್ಲು ಮತ್ತು ಕಾಂಕ್ರೀಟ್ ಕಟ್ಟಡಗಳು ಕುಸಿದಿವೆ. ಈ ವೇಳೆ ಹಲವರು ಸ್ಥಳದಲ್ಲಿ ಸಾವಿಗೀಡಾದರೆ, ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿ, ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೂಮಿ ಕಂಪಿಸಿದ ಕೂಡಲೇ ತಮ್ಮ ಮನೆಗಳಿಂದ ಹೊರಗೆ ಓಡಿಬಂದ ನಿವಾಸಿಗಳು, ತೀರ ಆತಂಕಕ್ಕೊಳಗಾದರು ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ತೀವ್ರ ಕಂಪನಕ್ಕೆ ಮನೆಗಳ ಕಾಂಕ್ರೀಟ್ ಗೋಡೆಗಳು ಕುಸಿದಿದ್ದು, ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ. ಇದರೊಟ್ಟಿಗೆ ರಸ್ತೆಗಳು ಆಳವಾದ ಬಿರುಕು ಬಿಟ್ಟಿವೆ ಎಂದು ಅಗ್ನಿಶಾಮಕ ದಳದ ಅಧಿಕಾರಿ ರೇ ಕ್ಯಾನೆಟೆ ಹೇಳಿದ್ದಾರೆ,(ಏಜೆನ್ಸೀಸ್).