ಸಂಸ್ಕೃತಿಯ ಪ್ರತಿಬಿಂಬವೇ ಪರೋಪಕಾರ

shimogga siri legion
ಶಿವಮೊಗ್ಗ ಸಿರಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.
Published on

ಶಿವಮೊಗ್ಗ: ಸಂಸ್ಕೃತಿಯ ಪ್ರತಿಬಿಂಬವೇ ಪರೋಪಕಾರವಾಗಿದ್ದು ಸಮಾಜಸೇವೆ ಭಾರತೀಯ ಸಂಸ್ಕೃತಿಯ ಸಂಕೇತ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಅಡಿ ಶಿವಮೊಗ್ಗ ಸಿರಿ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸೀನಿಯರ್ ಚೇಂಬರ್ ಸಂಸ್ಥೆ ಸೇವಾಮನೋಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದು ಸಂಸ್ಥೆಯ ಸೇವೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಸಮಾಜಸೇವೆ ಮಾಡಬೇಕು ಎನ್ನುವುದೇ ನಮ್ಮ ಸಂಸ್ಕೃತಿಯಾಗಿದೆ. ಸಮಾಜಸೇವೆಯನ್ನು ಕೆಲಸವೆಂದು ಭಾವಿಸದೇ ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಗಂಗೆಯನ್ನು ಶುದ್ಧೀಕರಣ ಮಾಡಿದರೆ, ಸಿರಿ ಶಾಖೆಯು ತುಂಗೆ ಭದ್ರೆಯ ಶುದ್ಧೀಕರಣಕ್ಕೆ ಮುಂದಾಗಿರುವುದು ಶ್ಲಾಘನೀಯ. ಸರ್ಕಾರದ ಮಟ್ಟದಲ್ಲಿ ಏನೆಲ್ಲ ಸಹಾಯ, ಸಹಕಾರ ಬೇಕೋ ಅದನ್ನು ಮಾಡಲು ಸಿದ್ಧನಿದ್ದೇನೆ ಎಂದರು.
ಎನ್‌ಡಿ ಮ್ಯಾನೇಜ್‌ಮೆಂಟ್‌ನ ಸೀನಿಯರ್ ಪಿಪಿಎಫ್ ನವೀನ್ ಅಮಿನ್ ಮಾತನಾಡಿ, ಭಾವನಾ ಸಂಸ್ಥೆಯು ಶಿವಮ್ಗೊಗ ಸಿರಿ ಶಾಖೆಯನ್ನು ಪ್ರಾರಂಭಿಸುವ ಮೂಲಕ ಸಮಾಜಸೇವೆಯಲ್ಲಿ ಹೊಸ ಬೀಜ ಬಿತ್ತಿದೆ. ಸೀನಿಯರ್ ಚೇಂಬರ್‌ಗೆ ಭಾವನಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸ್ಕಾರಲ್‌ಶಿಪ್ ನೀಡಲಾಗುತ್ತಿದೆ. ಆ ಮೂಲಕ ಬಡ ವಿದ್ಯಾರ್ಥಿಗಳ ಬಾಳಲ್ಲಿ ಆಶಾಕಿರಣ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಸಮಾಜಸೇವೆಯನ್ನು ದೊಡ್ಡಮಟ್ಟದಲ್ಲಿ ಮಾಡಬೇಕು ಎಂದಿಲ್ಲ. ಸಣ್ಣಪುಟ್ಟದ್ದಾದರೂ ಸೇವೆ ಸಲ್ಲಿಸುವ ಮನಸ್ಸು ಇರಬೇಕು. ತಳಮಟ್ಟದಲ್ಲಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶವಾಗಿದೆ. ಅದರಲ್ಲೂ ಸರ್ಕಾರ ಸೌಲಭ್ಯಗಳನ್ನು ಅರ್ಹರಿಗೆ ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಸಂಚಾಲಕಿ ಸುರೇಖಾ ಮುರುಳೀಧರ್ ಮಾತನಾಡಿ, ಹಲವಾರು ಪರಿಣಿತರು ಕೈಜೋಡಿಸಿದ್ದು ಸಂಸ್ಥೆಗೆ ಬಲ ಬಂದಿದೆ. ತುಂಗಾನದಿ ಸಾಕಷ್ಟು ಮಲೀನವಾಗುತ್ತಿದ್ದು ಅದನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಂಸ್ಥೆ ಮಾಡಲಿದೆ ಎಂದರು. ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್, ಉಪಾಧ್ಯಕ್ಷೆ ಪುಷ್ಪಾ ಶೆಟ್ಟಿ, ಎಸ್‌ಐಸಿ ಶಿವಮೊಗ್ಗದ ನಿಕಟಪೂರ್ವ ಅಧ್ಯಕ್ಷೆ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಪದಗ್ರಹಣ
ಸಿರಿ ಶಾಖೆಗೆ ಸೀನಿಯರ್ ಪಿಪಿಎಫ್ ಉಷಾ ಉತ್ತಪ್ಪ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಶಾರದಾ ಧನಪಾಲ್, ಉಪಾಧ್ಯಕ್ಷರಾಗಿ ಮಧುಸೂದನ್, ಜಂಟಿ ಕಾರ್ಯದರ್ಶಿಯಾಗಿ ಗೌರಿ ಶ್ರೀಕಾಂತ್, ಖಜಾಂಚಿಯಾಗಿ ಆನಂದ ಶಣೈ, ಸದಸ್ಯರಾಗಿ ಎಚ್.ಜಿ.ಲೋಕೇಶ್, ರಾಜಮ್ಮ, ಪೂರ್ಣಿಮಾ ನಾಗರಾಜ್, ಜಿ.ನೂತನ್, ಲಕ್ಷ್ಮೀ ಕೋಟಿ, ಗಾನವಿ ಗೌಡ, ಉಮಾ, ಮಂಜುಳಾ, ಎನ್.ಜಿ.ಶ್ರೀಥೇಶ್ ಮತ್ತಿತರರು ಅಧಿಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net