

ಹರಿಯಾಣ: ದೀಪಾವಳಿ ಹಬ್ಬದಂದು ಪ್ರತಿಯೊಂದು ಕಂಪನಿಯು ತಮ್ಮ ಉದ್ಯೋಗಿಗಳಿಗೆ ಸಿಹಿ ತಿಂಡಿ ಹಾಗೂ ಕೆಲವು ಗಿಫ್ಟ್ಗಳನ್ನು ಉಡುಗೊರೆಗಳನ್ನು ನೀಡುತ್ತದೆ. ಆದರೆ ಫಾರ್ಮಾ ಕಂಪನಿಯೊಂದು ಬೆಳಕಿನ ಹಬ್ಬ ದೀಪಾವಳಿಗೆ ಉದ್ಯೋಗಿಗಳಿಗೆ ಈ ಬಾರಿ ಹೆಚ್ಚು ವಿಶೇಷವಾದ ಉಡುಗೊರೆ ನೀಡುವ ಮೂಲಕ ಸುದ್ದಿಯಾಗಿದೆ.
ಹರಿಯಾಣ ಪಂಚಕುಲದಲ್ಲಿರುವ (Pharma company) ಫಾರ್ಮಾ ಕಂಪನಿಯೊಂದು ನೌಕರರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಇರುವ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ 12 ವಾಹನಗಳನ್ನು ಉಡುಗೊರೆಯಾಗಿ ನೀಡಿದರು. ಫಾರ್ಮಾ ಕಂಪನಿ ಮಾಲೀಕರು ಕಂಪನಿಯು ತನ್ನ 12 ಅತ್ಯುತ್ತಮ ಉದ್ಯೋಗಿಗಳ ಕಾರ್ಯಕ್ಷಮತೆಗಾಗಿ 7 ಲಕ್ಷ ರೂಪಾಯಿ ಮೌಲ್ಯದ ಟಾಟಾ ಪಂಚ್ ಕಾರನ್ನು ದೀಪಾವಳಿ ಉಡುಗೊರೆಯಾಗಿ ನೀಡಿದೆ.
ಕಂಪನಿಯ ಮಾಲೀಕರಾದ ಎಂ.ಕೆ.ಭಾಟಿಯಾ ಮಾತನಾಡಿ, ‘ಹಲವು ವರ್ಷಗಳಿಂದ ನೌಕರರ ಶ್ರಮದಿಂದ ನಾನು ಇಂದು ಉನ್ನತ ಸ್ಥಾನಕ್ಕೆ ತಲುಪಿದ್ದೇನೆ. ಕೆಲ ಸಮಯದ ಹಿಂದೆ ನಾನು ನನ್ನ ಉದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿದ್ದೆ. ನನ್ನ ಭರವಸೆಯನ್ನು ಈಡೇರಿಸಿದ್ದೇನೆ. ಈ ಮೈಲುಗಲ್ಲು ತಲುಪಲು ಸಂಸ್ಥೆ ಆರಂಭವಾದಾಗಿನಿಂದ ಹಗಲಿರುಳು ದುಡಿದ ನೌಕರರನ್ನು ಶ್ಲಾಘಿಸಿದರು.
ತಮ್ಮ ಯಜಮಾನನ ಮಹಾನ್ ಔದಾರ್ಯದಿಂದ ಅವರೆಲ್ಲರೂ ಕಣ್ಣೀರು ಹಾಕಿದರು. ಇಲ್ಲಿಯವರೆಗೆ ಕಾರು ಓಡಿಸಲು ಗೊತ್ತಿರಲಿಲ್ಲ, ಈಗ ಕಾರು ಓಡಿಸಲು ಕಲಿಯುತ್ತೇವೆ ಎನ್ನುತ್ತಾರೆ ಮಹಿಳಾ ಉದ್ಯೋಗಿಗಳು.
ತಮ್ಮ ಕಂಪನಿಯ ಆಡಳಿತ ಮಂಡಳಿ ಉದ್ಯೋಗಿಗಳೊಂದಿಗೆ ಸಂತಸ ಹಂಚಿಕೊಂಡಿದ್ದು, ಅವರ ಕುಟುಂಬ ಸದಸ್ಯರೂ ಸಂತಸ ವ್ಯಕ್ತಪಡಿಸಿದ್ದಾರೆ. ಕಾರು ಬಂದ ಖುಷಿ ಹೇಳತೀರದು ಎಂದರು. ಇದೆಲ್ಲಾ ನಿಜಕ್ಕೂ ಸಂತಸ ತಂದಿದೆ ಎಂದು ಉದ್ಯೋಗಿಗಳಿಗೂ ಹೇಳಿದ್ದಾರೆ. ನೌಕರರು ಕಾರುಗಳನ್ನು ಉಡುಗೊರೆಯಾಗಿ ಸ್ವೀಕರಿಸುತ್ತಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.