ಪಿಎಫ್ ವಿತ್​ಡ್ರಾ ನಿಯಮ ಸಡಿಲಿಕೆ

epfo
Published on

ನವದೆಹಲಿ: ಕರೊನಾ ವೈರಸ್ ಹಾವಳಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಭವಿಷ್ಯ ನಿಧಿ (ಪಿಎಫ್) ಹಣವನ್ನು ವಾಪಸ್ ಪಡೆಯುವ ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್​ಒ) ನಿಯಮವನ್ನು ಕೇಂದ್ರ ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯ ಸಡಿಲಿಸಿದೆ. ನೌಕರರ ಮೂರು ತಿಂಗಳ ಮೂಲ ವೇತನ ಹಾಗೂ ತುಟ್ಟಿಭತ್ಯೆ ಅಥವಾ ಅವರ ಖಾತೆಯಲ್ಲಿರುವ ಒಟ್ಟು ಹಣದ ಶೇಕಡಾ 75ರಷ್ಟು ಈ ಎರಡರಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ವಾಪಸ್ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್ ಪೀಡಿತವೆಂದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದ ಪ್ರದೇಶ ವ್ಯಾಪ್ತಿಯ ನೌಕರರು, ಕಾರ್ವಿುಕರು ಈ ಸೌಲಭ್ಯಕ್ಕೆ ಅರ್ಹರು ಎಂದು ಸಚಿವಾಲಯ ಹೇಳಿದೆ. ಹಣ ಪಡೆಯಲು ಪಿಎಫ್ ಚಂದಾದಾರರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಿಯಮ ತಿದ್ದುಪಡಿ ಬಗ್ಗೆ ಎಲ್ಲ ಪಿಎಫ್ ಕಚೇರಿಗಳಿಗೆ ತಿಳಿಸಲಾಗಿದ್ದು, ಅದರನ್ವಯ ಸಲ್ಲಿಸುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ದೇಶಿಸಲಾಗಿದೆ.

ಯಾರಿಗೆ ಅನ್ವಯ?

ಗರಿಷ್ಠ ನೂರರಷ್ಟು ಉದ್ಯೋಗಿಗಳಿರುವ ಹಾಗೂ ಮಾಸಿಕ -ಠಿ; 15 ಸಾವಿರಕ್ಕಿಂತ ಕಡಿಮೆ ವೇತನವಿರುವಂತಹ ನೌಕರರಿಗೆ ಈ ನಿಯಮ ಅನ್ವಯವಾಗುತ್ತದೆ. ಪಿಎಫ್ ಖಾತೆಯಿಂದ ವಿತ್ ಡ್ರಾ ಮೊತ್ತವನ್ನು ವಾಪಸ್ ಕಟ್ಟಬೇಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net