

ನವದೆಹಲಿ: ಗಾಂಧಿ ಜಯಂತಿಯ ದಿನದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrole Price)ಗಳನ್ನು ನವೀಕರಿಸಲಾಗಿದೆ. ಪರಿಷ್ಕೃತ ಇಂಧನ ಬೆಲೆಗಳ ವಿವರ ಇಲ್ಲಿದೆ.
ದೇಶದಲ್ಲಿ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾವಣೆಯಾಗುತ್ತವೆ. ಬೆಲೆಯನ್ನು ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಿರ್ಧರಿಸುತ್ತವೆ. ಅದರಂತೆ ಎಲ್ಲಾ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ನ ಬುಧವಾರದ ಬೆಲೆಗಳನ್ನು ಬಿಡುಗಡೆ ಮಾಡಿvವೆ.
ಇಂಧನ ದರ ಕುರಿತು ತೈಲ ಮಾರುಕಟ್ಟೆ ಕಂಪನಿಗಳ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳಲ್ಲಿ ಬೆಲೆ ಪರಿಶೀಲಿಸಿದರೆ ಕಳೆದ 10 ದಿನದಿಂದ ಯಾವುದೇ ಬದಲಾವಣೆಯಾಗಿಲ್ಲ. ಎಚ್‌ಪಿಸಿಎಲ್ ವೆಬ್‌ಸೈಟ್ ಪ್ರಕಾರ ದೇಶದ ಮಹಾನಗರಗಳು ಸೇರಿದಂತೆ ಇತರ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಅಲ್ಲಿನ ತೆರಿಗೆ, ದೂರಕ್ಕೆ ಅನುಗುಣವಾಗಿ ಒಂದೆರಡು ರೂ.ಗಳ ವ್ಯತ್ಯಾಸವಷ್ಟೇ ಕಂಡು ಬರುತ್ತದೆ.
ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.76 ರೂ., ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.43 ರೂ., ಡೀಸೆಲ್ ಲೀಟರ್‌ಗೆ 89.95 ರೂ. ಇದೆ.
ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.93 ರೂ., ಡೀಸೆಲ್ ಪ್ರತಿ ಲೀಟರ್‌ಗೆ 91.75 ರೂ., ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.73 ರೂ., ಡೀಸೆಲ್ ಲೀಟರ್‌ಗೆ 92.32 ರೂ. ಇದೆ. ಅದೇ ರೀತಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್‌ಗೆ 102.86 ಆಗಿದೆ.
ಮಂಗಳವಾರಕ್ಕೆ(ಸೆ.30)ಕ್ಕರ ಹೋಲಿಸಿದರೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ 2 ತಿಂಗಳಲ್ಲಿ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 102.92 ಮತ್ತು 102.86 ರ ನಡುವೆ ಏರಿಳಿತವಾಗಿದೆ.