

ಕೊಲಂಬೋ: ಭಾರತೀಯ ತೈಲ ನಿಗಮದ (ಐಒಸಿ) ಶ್ರೀಲಂಕಾ ಶಾಖೆ ಜಾಗತಿಕ ಇಂಧನ ಬೆಲೆಯೇರಿಕೆ ಹಿನ್ನೆಲೆಯಲ್ಲಿ ಶನಿವಾರ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 20 ರೂಪಾಯಿ ಮತ್ತು ಡೀಸೆಲ್ ಬೆಲೆಯನ್ನು 15 ರೂಪಾಯಿ ಹೆಚ್ಚಳ ಮಾಡಿದೆ. ಲಂಕಾ ಐಒಸಿ (ಎಲ್ಐಒಸಿ) ಈ ತಿಂಗಳಲ್ಲಿ ಇಂಧನ ದರ ಪರಿಷ್ಕರಣೆ ಮಾಡಿದ್ದು ಇದು ಎರಡನೇ ಸಲವಾಗಿದೆ.
ಪರಿಷ್ಕರಣೆಯಿಂದಾಗಿ ಒಂದು ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಅನುಕ್ರಮವಾಗಿ 204 ರೂಪಾಯಿ ಹಾಗೂ 139 ರೂಪಾಯಿ ಆಗಿದೆ. ಆಥಿರ್ಕ ಸಂಕಷ್ಟದಿಂದ ಪಾರಾಗಲು ಒಪ್ಪಂದ ಮಾಡಿಕೊಳ್ಳಲು ಲಂಕಾ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ಭಾರತಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ ಒಪ್ಪಂದ ಜಾರಿ ವಿಳಂಬವಾಗುತ್ತಿರುವುದರಿಂದ ಎಲ್ಐಒಸಿ ಇಂಧನ ದರಗಳನ್ನು ಗನನೀಯವಾಗಿ ಏರಿಸಿದೆ.